background cover of music playing
Chanda Chanda - Ravi Basrur

Chanda Chanda

Ravi Basrur

00:00

03:20

Song Introduction

ಈ ಹಾಡಿನ ಬಗ್ಗೆ ಯಾವುದೇ ಸಂಬಂಧಿತ ಮಾಹಿತಿ ಸಿಕ್ಕಿಲ್ಲ.

Similar recommendations

Lyric

ಭಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿನ್ ಕಂಡ್ರೆ

ಒಂದು ಚೂರು ಬೈಯುದಿಲ್ಲ ರಾತ್ರಿ ಕುಡ್ಕಂಡ್ ಬಂದ್ರೆ

ಭಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿನ್ ಕಂಡ್ರೆ

ಒಂದು ಚೂರು ಬೈಯುದಿಲ್ಲ ರಾತ್ರಿ ಕುಡ್ಕಂಡ್ ಬಂದ್ರೆ

TV radio ಎಂಥ ಬ್ಯಾಡ ಅವ್ಳು ಮನೆಗಿದ್ರೆ

ಅವ್ಳು ಉಂತೆ ಇಲ್ಲ ಕಾಣಿ ನಾನು ಊಟ ಮಾಡ್ದೆ

ನನ್ನಕ್ಕಿಂತ ಚೂರು ದಪ್ಪ ಆದ್ರು ನಂಗೆ ಅಡ್ಡಿಲ್ಲೇ

ಅವ್ಳು ಕಣ್ಣು ಬಿಟ್ರೆ ನಂಗೆ ಮಾತೆ ಬತ್ತಿಲ್ಲೇ

ಅವ್ಳು ಸೀರೆ ಉಟ್ಕಬಂದ್

ಎದ್ರಿಗ್ ನಿಂತ್ ಕೂಡ್ಲೆ ಮನ್ಸ್ಹೇಳತ್ತೊಂದು ಮಾತು

ಚಂದ ಚಂದ ಚಂದ ಚಂದ ನನ್ ಹೆಂಡ್ತಿ

ಮೂಗಿನ್ ತುದೀಲಿ ಸ್ವಲ್ಪ ಸಿಟ್ಟು ಜಾಸ್ತಿ

ಚಂದ ಚಂದ ಚಂದ ಚಂದ ನನ್ ಹೆಂಡ್ತಿ

ನನ್ನಂಥ ಗಂಡನಿಗೆ ಅವ್ಳೇ ಆಸ್ತಿ

ಮನೆಯ ಬಾಗಿಲಲ್ಲಿ

ಮನದಂಗಳದಲ್ಲಿ ರಂಗೋಲಿ ಇಡುವ ಕೈಯ್ಯ ಹ್ಯಾಂಗೆ ಮರೆಯಲಿ

ಬೀಸೋ ಗಾಳಿ ತಾಗಿ ಮುಂಗುರುಳು ಕೆಳಗೆ ಇಳಿದು

ಎಷ್ಟು ಚಂದ ಕಾಣುತಾಳೆ ಹ್ಯಾಂಗೆ ಹೇಳಲಿ

ಧರ್ಮಪತ್ನಿ ಧರ್ಮಕ್ಕೆ ಕಣ್ಣಿನಲ್ಲೇ ಬಯ್ಯೋ ಮಾತು

ನೋಡಿದಾಗ ನನ್ನ ಹೆಂಡ್ತಿ ಸ್ವಪ್ನ ಸುಂದರಿ

ಊರ ಮಾತು ಕೇಳಿ ಕೆಟ್ಟು ಬದುಕು ದೊಂಬರಾಟ ಆದ್ರೂ

ಸಾಯೋತನಕ ಹೆಗಲ ನೀಡೋ ವಿಶ್ವ ಸುಂದರಿ

ಎಷ್ಟೇ beauty ಎದುರು ಕಂಡ್ರು

ನನ್ನ ಹೆಂಡ್ತಿ ಕಂಡ ಮನ್ಸ್ಹೇಳತ್ತೊಂದು ಮಾತು

ಚಂದ ಚಂದ ಚಂದ ಚಂದ ನನ್ ಹೆಂಡ್ತಿ

ಮೂಗಿನ್ ತುದೀಲಿ ಸ್ವಲ್ಪ ಸಿಟ್ಟು ಜಾಸ್ತಿ

ಚಂದ ಚಂದ ಚಂದ ಚಂದ ನನ್ ಹೆಂಡ್ತಿ

ನನ್ನಂಥ ಗಂಡನಿಗೆ ಅವ್ಳೇ ಆಸ್ತಿ

ಭಾರಿ ಖುಷಿ ಮಾರ್ರೆ ನಂಗೆ ನನ್ನ ಗಂಡ ಅಂದ್ರೆ

ಕೆನ್ನೆ ಕೆಂಪ ಆತ ಕಾಣಿ ಅವ್ರು ಹತ್ರ ಬಂದ್ರೆ

ಚಿನ್ನ ಬೆಳ್ಳಿ ಎಂಥ ಬ್ಯಾಡ ಅವ್ರ್ ಪ್ರೀತಿ ಸಿಕ್ರೆ

ಎಲ್ಲ ಕಷ್ಟ ದೂರ ಆತ ಅವ್ರು ಒಮ್ಮೆ ನಕ್ರೆ

ನನ್ನಕ್ಕಿಂತ ಮಾತು ಕಮ್ಮಿ ಆರು ನಂಗೆ ಅಡ್ಡಲ್ಲೇ

ಹೆಂಡ್ತಿ ಮಾತು ಕೆಂಬು ಗಂಡ್ಸಿಕ್ರೆ ಸಾಕಲೇ

ಅವ್ರು ಪಂಚೆ ಎತ್ತಿ ಕಟ್ಟಿ

ಕಣ್ಣುಹೊಡ್ದ್ ಕೂಡ್ಲೆ ಮನ್ಸ್ಹೇಳತ್ತೊಂದು ಮಾತು

ಚಂದ ಚಂದ ಚಂದ ಚಂದ ನನ್ ಗಂಡ

ಕಣ್ಣಿನಲ್ಲೇ ಸನ್ನೆ ಮಾಡಿ ಅಪ್ಪಿಕೊಂಡ

ಚಂದ ಚಂದ ಚಂದ ಚಂದ ನನ್ ಗಂಡ

ಬೈದ್ರೂನು ಮತ್ತೆ ನನ್ನ ಒಪ್ಪಿಕೊಂಡ

- It's already the end -