00:00
04:13
ಈ ಹಾಡಿನ ಕುರಿತು ಈ ಸಮಯಕ್ಕೆ ಸಂಬಂಧಿಸಿದ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.
ಒಮ್ಮೊಮ್ಮೆ ನನ್ನನ್ನು ನಾನೇನೇ ಕೊಲೆಗೈಯುವೆ
ಇನ್ನೊಮ್ಮೆ ನಿನ ಕಂಡು ನಾ ಚೂರು ಸರಿಹೋಗುವೆ
ನನ್ನ ನೀನು ಎಂದೆಂದೂ ಕ್ಷಮಿಸಬೇಡ
ಒಂದು ಕನಸು ಜೀವಂತ ಉಳಿಸಬೇಡ
ಅನುರಾಗದ ಅಪರಾಧಕೆ ನಿನ ಕೋಪವೇ ಕಿರುಕಾಣಿಕೆ
ಒಮ್ಮೊಮ್ಮೆ ನನ್ನನ್ನು ನಾನೇನೇ ಕೊಲೆಗೈಯುವೆ
♪
ಮಾತು ಆಡಲಾರೆ ಕಣ್ಣಲ್ಲಿ ನೋಡಲಾರೆ
ನಿನ್ನೆದುರು ಹೇಗೆ ನಿಂತುಕೊಳ್ಳಲಿ
ಹೋಗು ನೀನು ಸಾಕು ನಾನಿನ್ನು ಬೇಯಬೇಕು
ಈ ಏಕಾಂತದ ಬೆಂಕಿ ಊರಲಿ
ತಿಳಿಸಿದರೂನು ಮುಗಿಯದ ಕಥೆಯ
ಕೇಳುವ ಸಹನೆ ನಿನಗೇತಕೆ
ಅನುರಾಗದ ಅಪರಾಧಕೆ ಕಡು ವಿರಹವೇ ಕಿರುಕಾಣಿಕೆ
♪
ಓ, ಒಂದೇ ಒಂದು ಬಾರಿ ತೊಳಲ್ಲಿ ಅಳುವ ಆಸೆ
ಬೇರೇನು ಬೇಡ ನನ್ನ ಜೀವಕೆ
ಎಲ್ಲೋ ಇರುವೆ ನಾನು, ಇನ್ನೆಲ್ಲೋ ಸಿಗುವೆ ನೀನು
ಆ ಮೌನ ಸಾಕು ಪೂರ್ತಿ ಜನ್ಮಕೆ
ನೆನಪಿನ ಕವಿತೆ ನೆನಪಲೇ ಇರಲಿ
ಮುಂದಕೆ ಹಾಡು ಇನ್ನೇತಕೆ
ಅನುರಾಗದ ಅಪರಾಧಕೆ ಸಿಗಲಾರದು ಸ್ವರಮಾಲಿಕೆ
ಒಮ್ಮೊಮ್ಮೆ ನನ್ನನ್ನು ನಾನೇನೇ ಕೊಲೆಗೈಯುವೆ