background cover of music playing
Shaakuntle Sikkalu - Sanjith Hegde

Shaakuntle Sikkalu

Sanjith Hegde

00:00

03:50

Similar recommendations

Lyric

ಶಾಕುಂತ್ಲೆ ಸಿಕ್ಕಳು

ಸುಮ್ ಸುಮ್ನೆ ನಕ್ಕಳು

Shock ಆಯ್ತು ನರ ನಾಡಿ ಒಳಗೆ

ದುಷ್ಯಂತ ಆಗಲಾ

ಉಂಗ್ರಾನಾ ನೀಡಲಾ

ನದಿ ಯಾವ್ದು ಇರಬಾರದು ನಮಗೆ

ಮನಸೇ, ನಿ ಬದಲಾದೆ

ತುಟಿಯೇ, ನಿ ತೊದಲಾದೆ

ಪದೇ ಪದೇ ಸತಾಯಿಸೋ ನಗುವು ಅವಳದೆ

ಶಾಕುಂತ್ಲೆ ಸಿಕ್ಕಳು

ಸುಮ್ ಸುಮ್ನೆ ನಕ್ಕಳು

Shock ಆಯ್ತು ನರ ನಾಡಿ ಒಳಗೆ

ಮಳೆಗೆ ತಿಳಿಗಾಳಿ ಹಿಂಬಾಲಕ

ಅಲೆಗೆ ಅಲೆಯೊಂದು ಹಿಂಬಾಲಕ

ಅವುಗಳಿಗೆ ಇರುವತರ ನನಗಿದೆ ವ್ಯಾಮೋಹವು

ಇವಳ ನಡೆ ಇರುವ ಕಡೆ ಅಲೆಯುವೆ ನಾನು

ಅವಳೇ ನನ್ನೆದುರಲ್ಲಿ

ಅವಳೇ ಕಣ್ಣೆದುರಲ್ಲಿ

ಪದೇ ಪದೇ ಮಿಲಾಯಿಸೋ ಕಣ್ಣು ಅವಳದೆ

ಅವಳ ನೆರಳೇನೆ ಸಮ್ಮೋಹಕ

ನನಗೆ ಅನುರಾಗ ಸಂವಾಹಕ

ಅನುದಿನವು ಅನುಕ್ಷಣವು ಎದುರಿಗೆ ನಾ ಹೊದೆನು

ಒಲವೆನುವ ಪದನಿಸವ ಗುನುಗುವೆ ನಾನು

ಅವಳೇ ನನ್ನಾಕಾಶ

ಅವಳೇ ನನ್ನವಕಾಶ

ಪದೇ ಪದೇ ಕಿಚಾಯಿಸೋ ಕನಸು ಅವಳದೆ

ಶಾಕುಂತ್ಲೆ ಸಿಕ್ಕಳು

ಸುಮ್ ಸುಮ್ನೆ ನಕ್ಕಳು

Shock ಆಯ್ತು ನರ ನಾಡಿ ಒಳಗೆ

ದುಷ್ಯಂತ ಆಗಲಾ

ಉಂಗ್ರಾನಾ ನೀಡಲಾ

ನದಿ ಯಾವ್ದು ಇರಬಾರದು ನಮಗೆ

ಮನಸೇ, ನಿ ಬದಲಾದೆ

ತುಟಿಯೇ, ನಿ ತೊದಲಾದೆ

ಪದೇ ಪದೇ ಸತಾಯಿಸೋ ನಗುವು ಅವಳದೆ

- It's already the end -