00:00
03:34
ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೇ ಅಲ್ಲವೇ
ಮಾಯಾದ ಮಾಯಾದ
ಕನಸಿನಲ್ಲಿ ನಾ ನಿನ್ನ ಸೇರಲೇ
ಕೈಜಾರೋ ಸಂಜೆಯಾ
ಕೈಬೀಸಿ ಕರೆದೆಯಾ
ನೂರಾರು ಕಲ್ಪನೆ
ಮೆಲ್ಲನೇ
ಬಂದು ಮರೆಯಾಗಿದೆ
ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೇ ಅಲ್ಲವೇ
♪
ಹೂವಂತೆ ನಗಲು ಪ್ರೀತಿ
ಕೈಚಾಚಿ ಕರೆದ ರೀತಿ
ಅದು ವಿರಳ ತುಂಬಾ ಸರಳ
ನದಿ ತುಂಬೋ ರೀತಿ ಕಡಲ
ನಾನು ಈಗ ಬೇಕಂತಲೆ
ನಗಿಸೊಕೆ ಬಂದೆ ಶಾಕುಂತಲೆ
ನಿನ್ನ ಮೋಹಿಸುವಂತಲೇ
ನೂರಾರು ಕನಸು ಹೂ ಅಂತಲೇ
ಇದುವೆ ನಮಗೆ ಹೊಸ ಬದುಕಿದು
ಬಾ ನನ್ನ ಬಾ ನನ್ನ
ಬಂದು ಕೇಳು ಒಮ್ಮೆ ನನ್ನ ಕಂಪನ
ನಾ ನಿನ್ನ ನಾ ನಿನ್ನ
ಕೂಡಿಬಾಳಬೇಕು ಅನ್ನೋ ಆಸೇನಾ
♪
ತಾನಾಗೇ ಹುಟ್ಟೋ ಪ್ರೀತಿ
ನಮ್ಮ ನೆನಪೇ ನಮಗೆ ಸ್ಫೂರ್ತಿ
ಅದು ಬಹಳ ಅಂತರಾಳ
ಇದು ತಿಳಿಸೋ ರೀತಿ ಬಹಳ
ಒಮ್ಮೆ ಬಿಟ್ಟು ಸ್ಪಂದಿಸೋ ಸರಿಯಾದ ಸಮಯಕೆ ಸೇರಿಸೋ
ಒಮ್ಮೆ ಕೈಯ್ಯನು ಹಿಡಿದರೇ
ಅದೇ ತಾನೆ ಪ್ರೀತಿಯ ಆಸರೆ
ಇದುವೇ ನಮಗೆ ಹೊಸ ಬೆಸುಗೆಯ
ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೇ ಅಲ್ಲವೇ
ಮಾಯಾದ ಮಾಯಾದ
ಕನಸಿನಲ್ಲಿ ನಾ ನಿನ್ನ ಸೇರಲೇ