background cover of music playing
Malage Malage - From "Ricky" - Karthik

Malage Malage - From "Ricky"

Karthik

00:00

03:36

Similar recommendations

Lyric

ಮಲಗೆ, ಮಲಗೆ

ಮಲಗೆ, ಮಲಗೆ

ಎದೆಯ ಒಳಗೆ, ಎದೆಯ ಒಳಗೆ

ನನ್ನ ಪಯಣ ನೀ ಸೆಳೆದ ಕಡೆಗೆ

ಇರಲಿ ಗಮನ ಈ ಮರುಳ ನಡೆಗೆ

ನೀನು ಕಂಡ ಕನಸಿನ ಮನೆಯಲಿ ಒಂದು ಕೋಣೆ ನನಗಿರಲಿ

ಸಾವಿರಾರು ಸವಿ ಸವಿ ಬಯಕೆಗೆ ಹೇಗೆ ನಾನು ವಿವರಣೆ ಬರೆಯಲಿ?

ಮಲಗೆ, ಮಲಗೆ

ಮಲಗೆ, ಮಲಗೆ

ಎದೆಯ ಒಳಗೆ, ಎದೆಯ ಒಳಗೆ

ನೀ ಇಲ್ಲದಾಗ ನೋವು ಅಪಾರ

ಹೀಗೆಲ್ಲ ಪ್ರೀತಿ ಅಲ್ಲ ಸಸಾರ

ನಿನ್ನನು ಕನಸಿನ ಕಿಂಡಿಯಿಂದಾನೇ ನೋಡುವೆ

ಒಲವನು ಹೃದಯದ ಕೊಂಡಿಯಿಂದಾನೇ ದೋಚುವೆ

ನೀನು ಎಂಬ ಒಲವಿನ ಒಗಟನು ಎಷ್ಟು ಅಂತ ಬಿಡಿಸುತ ಅಲೆಯಲಿ?

ಮಲಗೆ, ಮಲಗೆ

ಮಲಗೆ, ಮಲಗೆ

ಎದೆಯ ಒಳಗೆ, ಎದೆಯ ಒಳಗೆ

ನಿನ್ನ ಹಿತನೇ ನನ್ನ ಇರಾದೆ

ನಿನ್ನೊಂದಿಗೆನೇ ಎಲ್ಲ ತಗಾದೆ

ಕನಸಲಿ ಕೆಣಕುವೆ ಬೇಕು ಬೇಕಂತ ನಿನ್ನನೇ

ಲೋಕದ ನಿಯಮಕೆ ದೂರದಿಂದಾನೇ ವಂದನೆ

ಹೇಗೆ ಬಂದು ಹಾಗೇ ಹೋದರೆ ಹೇಗೆ ನಾನು ವಿರಹವ ಸಹಿಸಲಿ?

ಮಲಗೆ, ಮಲಗೆ

ಮಲಗೆ, ಮಲಗೆ

ಎದೆಯ ಒಳಗೆ

ಎದೆಯ ಒಳಗೆ

ನನ್ನ ಪಯಣ ನೀ ಸೆಳೆದ ಕಡೆಗೆ

ಇರಲಿ ಗಮನ ಈ ಮರುಳ ನಡೆಗೆ

- It's already the end -