00:00
03:33
Good vibes ಒಳಗೆಳೆಯುತಾ, bad vibes ಹೊರಗೂದುತಾ
ಗುಮ್ ಅಂತ ಕಣ್ಣ್ಮುಚ್ಚಿಕೊಂಡು ನಿನ್ನ ಧ್ಯಾನ ಮಾಡ್ಬೇಕಲ್ಲೇ ತಲೆದೂಗುತ
ಒಳ್ಳೆ ತನ್ನಕೆಂದು ಸ್ವಾಗತ ಕೆಟ್ಟ ತನವಾಗ್ಲಿ ಭೂಗತ
ದೇವನೊಬ್ಬ ಒಳಗಿರುವನೆಂದು ನೀ ಬಾಳ್ವೆ ನಡೆಸಿದೊಳ್ ಅದ್ಭುತ
ಸರಿ ಕೇಳ್ ಜಗದಲಿ ಜಿಗಿದಬ್ಬರಿಸಿ ದವಸ ಪೊಗರಿದೊಳ್ ಕಮರು ಕಬ್ಬರವೇ
ದಿನದಲಿ ಒಲವನು ಇರಿಸಿ ದೈವ ನೇತ್ರನನ್ ನೆಚ್ಚಿ ನೆನೆ ಮನವೇ
ನಿಚ್ಚ ಮನದಿ ಸರಿ ದಾರಿ ತೋರು ನೀ ಪ್ರಬಲ ಮುಂದೆ ತಲೆ ಎತ್ತುವೆ
ಸ್ವಚ್ಛ ಗುಣವ ದಯಪಾಲಿಸೆನಗೆ ನ ಪ್ರೀತಿಗಾಗಿ ತಲೆಬಾಗುವೆ
ಹೆಜ್ಜೆ ಹೆಜ್ಜೆಗೂ ಕಾಲಿಗರ್ ಇಲ್ಲಿ
ಮಿತ್ರ ತೆಗಳಿದೊಳ್ ಬೆಳೆಯುವುದೆಲ್ಲಿ
ಜಾತಿ ಬೇಧವ ಮಾಡುವ ಮನುಜರ ಮದ್ಯೆ ಇದ್ರೆ ಸಹಬಾಳ್ವೆಯು ಎಲ್ಲಿ
ಹೊಸ ದಾರಿಯನ್ನು ನೀ ತೋರಿಸು ಮನ ಮಂದಿರವನ್ನು ರಕ್ಷಿಸು
ನನ್ನ ಅಹಂ ಅನ್ನು ನೀ ಕ್ಷೀಣಿಸಿ ಮನದಲ್ ಸೂರ್ಯೋದಯವನು ತೋರಿಸು
ಏಸು ಕಾಯಂಗಳ ಕಳೆದು ಎಂಬತ್ನಾಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ
ಏಸು ಕಾಯಂಗಳ ಕಳೆದು ಎಂಬತ್ನಾಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ
ತಾನಲ್ಲ ತನ್ನದಲ್ಲ, ತಾನಲ್ಲ ತನ್ನದಲ್ಲ
ಆಸೆ ತರವಲ್ಲ ಮುಂದೆ ಬಾಹುದಲ್ಲ
ದಾಸನಾಗು ವಿಶೇಷನಾಗು
ನೊಂದಿದ್ದೆ ಯಾರು ಇಲ್ಲ ಅಂತ ಈಗ ಒಂಟಿತನದ ಬೆಲೆ ಗೊತ್ತು
ನಂಬಿಕೆ ತುಂಬಾ ಇಡ್ತಿದ್ದೆಈಗ ಬೆನ್ನು ತುಂಬಾ ಬರಿ ಕುರುಪು
ಜೀವನ ಎಷ್ಟೇ ಪಾಠ ಕಳಿಸಿದರು ಕಡಿಮೆ ಅಗದೀ ಹುರುಪು
ನಿಜ ಪ್ರೀತಿ ಎಲ್ಲೂ ಸಿಗೋದಿಲ್ಲ ನಿನ್ನ ತಂದೆ ತಾಯಿಯಾ ಹೊರೆತು
ಯಾರೋ ಇಲ್ಲಿ ಬಡವ ಯಾರೋ ಇಲ್ಲಿ ಶ್ರೀಮಂತ
ನಿನ ಕರ್ಮಾದ ಫಲಾನು ಫಲಗಳು ಹೇಳುವುದು ನೀನು ಏನಂಥ
ಉತ್ತಮ ಮಾಧ್ಯಮ ಅಧಮ ಎಲ್ಲ ಒಂದೇ ಇಲ್ಲಿ ಇರೋತನ್ಕ
ನಿನ್ನ ನಂಬಿಕೆ ಒಂದೇ ಕಾಯೋದು ಕೊನೆತನ್ಕ
ನಗುವರ ನೋಡ್ನಗಲಿ ಕಾಲ್ ಎಳೆವರ ಕಾಲ್ ಎಳೀಲಿ
ನೀ ನಗು ನಗುತಾ ಮುಂದೆ ನಡೀತಿರು ನಿನ್ನ ಕೆಲಸ ಮಾತ್ರ ಮಾತಾಡ್ಲಿ
ಸೋಲುತ್ತೀಯ ಅಂದೋರಿಗೆಲ್ಲ ನೀ ಗೆದ್ದು ತೋರಿಸು ಬದಲು
ದೊಡ್ಡ ಸಾಧನೆಗೆ ಚಿಕ್ಕ ಅಂಬೆಗಾಲಿಂದ ಶುರು ಮಾಡು ಮೊದಲು
♪
ಏಸು ಕಾಯಂಗಳ ಕಳೆದು ಎಂಬತ್ನಾಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ
ಏಸು ಕಾಯಂಗಳ ಕಳೆದು ಎಂಬತ್ನಾಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ
ತಾನಲ್ಲ ತನ್ನದಲ್ಲ, ತಾನಲ್ಲ ತನ್ನದಲ್ಲ
ಆಸೆ ತರವಲ್ಲ ಮುಂದೆ ಬಾಹುದಲ್ಲ
ದಾಸನಾಗು ವಿಶೇಷನಾಗು
ದಾಸನಾಗು ವಿಶೇಷನಾಗು (ದಾಸನಾಗು ವಿಶೇಷನಾಗು)
ದಾಸನಾಗು ವಿಶೇಷನಾಗು (ದಾಸನಾಗು ವಿಶೇಷನಾಗು)
ದಾಸನಾಗು ವಿಶೇಷನಾಗು (ದಾಸನಾಗು ವಿಶೇಷನಾಗು)
(ದಾಸನಾಗು ವಿಶೇಷನಾಗು)