00:00
04:43
ಕೋಲು ಮಂಡೆ ಜಂಗುಮ ದೇವರು ಗುರುವೇ ಕ್ವಾರುಣ್ಯಕೆ ದಯಮಾಡವರೇ
ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ
ಕೋಲು ಮಂಡೆ ಜಂಗುಮ ದೇವರು ಗುರುವೇ ಕ್ವಾರುಣ್ಯಕೆ ದಯಮಾಡವರೇ
ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ
ಹರನಿಗೆ ಶರಣೆಂದೆ
ಗುರುವೇ, ಗುರುವಿಗೆ ಶರಣೆಂದೇ
ಹರ್ ಹರ್ ಶಿವ್ ಶಿವ್ ಶಂಕರ ನಮ್ಮ ಮಹದೇವ್ಗೆ ಶರಣೆಂದೆ
ಕುಲದಲ್ಲಿ ಕುರುಬ, ಒಕ್ಕಲು ಗೌಡ, ಸ್ವಾಮಿ ಜಾತಿ ವಾಡುಗ ನಿಲ್ಲಯ್ಯ
ನಿಲಗ ಮಡದಿ ಸಂಕಮ್ಮ, ಭೂಲೋಕದಲ್ಲಿ ಗಡ್ಚೆಲುವೆ
ಮಡದಿ ಸಂಕಮ್ಮ
ಬಳೆಗೆ ಬರ್ತಾವ್ನೆ
ದೇವಸ್ವರುಗ ನೀಲಯ್ಯ
ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ
ಅಯ್ಯ
ಕೋಲು ಮಂಡೆ ಜಂಗುಮರ ಕ್ವಾರುಣ್ಯಕೆ ದಯಮಾಡವರೇ
ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ
♪
ಎಲಾ ಸಂಕೆನ್ನೆ
ನಾನು ಹೆಜ್ಜೇನು ಮನೆ ಹೆಜ್ಜೇನು ಪ್ಯಾಟೆಗೆ ಹೋಯ್ತಿದ್ದೀನಿ ಮಡದಿ
(ಹೌದೌದು)
ಕುಲದೊರೆಲ್ಲ ಸೇರ್ಸಿ ನನ್ನ ಕರೀತಿದ್ದಾರೆ ಮಡದಿ
ನಿನ್ನ ಒಬ್ಬುಳ್ನೇ ಇಲ್ಲಿ ಬಿಟ್ಟು ಹೋಗೋದಕ್ಕೆ ನನಗೆ ಅನುಮಾನ ಮಡದಿ
ನೀನು ಬಲಗೈ ಮುಟ್ಟಿ ಭಾಸೆ ಕೊಟ್ಟು ನನ್ನ ಕಳಗೆಣ್ಣೆ
ಅಯ್ಯೋ ಯಜಮಾನ
ಅಂಥ ತಪ್ಪು ನಾನು ಏನ್ಮಾಡಿದೆ ಯಜಮಾನಾ
ಅಂಥ ತಪ್ಪುನೆಪ್ಪು ಕಂಡದೆ ಆದ ಪಕ್ಷದಲ್ಲಿ
ನಿನ್ನ ತಂದೆ ತಾಯಿ ಕರ್ಸಯ್ಯಾ
ಅತ್ತೆ ಮಾವರ ಕರ್ಸಯ್ಯಾ
ಅಣ್ಣ ತಮ್ಮಂದ್ರ ಕರ್ಸಯ್ಯಾ
ಅಕ್ಕ ತಂಗ್ಯಾರ ಕರ್ಸಯ್ಯಾ
ಬಾವ ಮೈದರ ಕರ್ಸಯ್ಯಾ
ಅತ್ತೆ ನಾದ್ನಿರ ಕರ್ಸಯ್ಯಾ
ಬಂದು ಬಳಗ ಕುರ್ಸಯ್ಯಾ
ಕುಲದವರ್ನೆಲ್ಲ ಸೆರ್ಸಯ್ಯಾ
ನ್ಯಾಯ ನಾದ್ರೂ ಮಾಡ್ಸಯ್ಯಾ
ತಪ್ಪುನೆಪ ತೊರ್ಸಯ್ಯಾ
ನೀನು ಕಟ್ಟಿದ ತೆರವ ಕತ್ತದಲ್ಲೇ ನನ್ನ ಬುಟ್ಟು ಬುಡಯ್ಯ ಮಡದಿಯಾ
ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ
ಅಯ್ಯ
ಕೋಲು ಮಂಡೆ ಜಂಗುಮರ ಕ್ವಾರುಣ್ಯಕೆ ದಯಮಾಡವರೇ
ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ
♪
ಎಲಾ ಮಡದಿ ಸಂಕೆನ್ನೆ
ಕಟ್ಟಿದ ತರುವನ್ನು ತಕ್ಕಂಡು ಬುಟ್ಟಬುಡೋಕೆ
ನೀನೇನು ದನವ, ಕರುವ, ಕುರಿಯ, ಕೋಳಿಯ, ಆಡು ಎಮ್ಮೆ ನಾ ಸಂಕೆನ್ನೆ
ನಿನ್ನ ಒಬ್ಬುಳ್ನೇ ಕಾಡು ಗೋಪಿನಾ
ಒಂಟಿ ಸೊಪ್ಪಿನ ಗುಳ್ಳಲ್ಲಿ ಇರುವಂತಹ ವ್ಯಾಳೆದಲ್ಲಿ
ಕೇಳು ಕೇಳು ಸಂಕೆನ್ನೆ
ಕೇಳು ಕೇಳು ಸಂಕೆನ್ನೆ
ಮುತ್ತಿನ ಸಂಟಿ ಬರ್ತಾನೆ
ಮುತ್ತು ಮುತ್ತಂಥ ಸಾರ್ಥನೆ
ಮುತ್ತಿನ ಸಂಟಿ ಕಟ್ಥಿಯಾ
ಚಾಪೆನಾದ್ರೂ ಹಾಸ್ತಿಯ
ಹೊಟ್ತುಂಬಾ ಉನ್ಸಿ ಕೇಳ್ತಿಯಾ
ನೀನು ಅವ್ನ ನೋಡ್ತಿಯಾ, ಅವ್ನು ನಿನ್ನ ನೋಡ್ತಾನೆ
ಅಂದ ಚಂದ ನೋಡ್ತಾನೆ, ದಪ್ಪಾ ಕುರುಪಾ ನೋಡ್ತಾನೆ
ಚಲುವ ಭಾವ ನೋಡ್ತಾನೆ
ನಿನ್ನಲೇ ಕಣ್ಣ ಇಟ್ಟು
ನಿಂಗೆ ಒಲುಮೆ ಮದ್ದು ಕೊಟ್ಟು ನಿನ್ನ ವಾಲಿಸಿ ಕೊಂಡು ವೈತಾನೆ
ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ
ಅಯ್ಯ
ಕೋಲು ಮಂಡೆ ಜಂಗುಮರ ಕ್ವಾರುಣ್ಯಕೆ ದಯಮಾಡವರೇ
ಕೋಲು ಮಂಡೆ ಜಂಗುಮ ದೇವರು ಗುರುವೇ ಕ್ವಾರುಣ್ಯಕೆ ದಯಮಾಡವರೇ
ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ
ಕೋಲು ಮಂಡೆ ಜಂಗುಮ ದೇವರು ಗುರುವೇ ಕ್ವಾರುಣ್ಯಕೆ ದಯಮಾಡವರೇ
ಕ್ವೋರಣ್ಯ ನೀಡವ್ವ ಕೋಡುಗಲಮ್ಮಾದೇವನಿಗೆ
(ಉಘೇ ಮಾತ್ಮಲ್ಲಯ್ಯ)