00:00
04:44
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ
ಅನುಮಾನವೇ ಇಲ್ಲ ಅನುರಾಗಿ ನಾನೀಗ
ಬದಲಾಗಿದೆ ಈಗ ನಿನ್ನಿಂದಲೇ ಈ ಜಗ
ಅನುಕ್ಷಣವು ಇನ್ನು ಮುಂದೆ ನನಗೆ ನೀನೇ ಬೇಕು
ಕೊನೆಯುಸಿರು ಹೋಗುವಾಗ ನಿನ್ನ ಮಡಿಲೇ ಬೇಕು
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ
♪
ಚೂರು ನೀ ನಗಲು ಹೊಸಬಣ್ಣಾನೆ ಬಾನಿಗೆ
ಪಾದ ಊರಿದರೇ ಅದು ಚಿತ್ತಾರ ಭೂಮಿಗೆ
ಎದುರಿರೆನೀನು ಎದೆಯೊಳಗೆ ತುಸು ನಸು ನಾಚಿಕೆ
ಅರಳಿದೆ ಜೀವ ಒಳಗೊಳಗೇ ಪಿಸು ಪಿಸು ಮಾತಿಗೆ
ನಿನ್ನ ಪ್ರೀತಿಗಾಗಿ ಇನ್ನು ನಾನು ನೂರು ನೂರು ಸಾರಿ ಸಾಯುವೆ
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ
♪
ಕೊಂಚ ಕೊಂದು ಬಿಡು ನಿನ್ನ ಕಣ್ಣಲ್ಲೇ ನನ್ನನ್ನು
ಬಾಚಿ ತಬ್ಬಿ ಬಿಡು ನಾ ಇನ್ನೇನು ಕೇಳೆನು
ಹಗಲಲೂ ನಿಂದೆ ಕನವರಿಕೆ ಮರುಳನ ಜೀವಕೆ
ನೆರಳಿಗೂ ಕೂಡ ಚಡಪಡಿಕೆ ಇನಿಯಳಸಂತಕೆ
ಬೇರೆ ಯಾವ ದೇವರಿಲ್ಲ ಇನ್ನೂ ನೀನೇ ನೀನೇ ನನ್ನ ದೇವತೆ
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ
ಅನುಕ್ಷಣವು ಇನ್ನೂ ಮುಂದೆ ನನಗೆ ನೀನೇ ಬೇಕು
ಕೊನೆಯುಸಿರು ಹೋಗುವಾಗ ನಿನ್ನ ಮಡಿಲೇ ಬೇಕು
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ