background cover of music playing
Chanda Avalu - Midhun Mukundan

Chanda Avalu

Midhun Mukundan

00:00

03:00

Similar recommendations

Lyric

ಚಂದ ಅವಳ ಕಿರು ಲಜ್ಜೆ, ಮಧುರ ಬೆಳ್ಳಿ ಮಣಿ ಗೆಜ್ಜೆ

ಶ್ವಾಸ ಏರಿ, ಇಳಿದು, ಸುತ್ತಲಿನ ಜಗವನೇ ಮರೆಯುತಿದೆ

ಒಲವ ಒನಕೆಯಡಿ ನೂಕಿ, ಹೃದಯ ಬಿರಿಯುವುದು ಬಾಕಿ

ಅವಳ ಕಣ್ಣ ಸಿಡಿಲು ಬಡಿದು ನನ್ನ ಧ್ವನಿ ಅದು ನಡುಗುತಿದೆ

ಕಳೆದಂತ ಕನಸುಗಳು, ಮರೆತಂತ ಮಿಡಿತಗಳು

ತರ -ತರದ ನಿನ್ನ ತರಗತಿಯಲ್ಲಿ ಹಾಜರಿ ಹಾಕುತಿದೆ

ಚಂದ ಅವಳ ಕಿರು ಲಜ್ಜೆ, ಮಧುರ ಬೆಳ್ಳಿ ಮಣಿ ಗೆಜ್ಜೆ

ಶ್ವಾಸ ಏರಿ, ಇಳಿದು, ಸುತ್ತಲಿನ ಜಗವನೇ ಮರೆಯುತಿದೆ

ಒಂದೇ ಮನವಿ, ಪ್ರೇಮ ಪದವಿ ನೀಡೆನಗೆ ನೀನು

ನೀನೇ ಗುರುವೂ, ನೀನೇ ಗುರಿಯೂ, ಕರಿ ಹಲಗೆ ಕಣ್ಣು

ಕೊಡುವೆಯಾ ಈ ಎದೆಯಲಿ ನಿನ್ನ ಹೆಸರ ಬರೆವ ಗುಪ್ತ ಲೇಖನ?

ನನ್ನ ವಿನಹ ನಿನ್ನ ಸನಿಹ ಬರದಿರಲಿ ಏನೂ

ಬೇರೆಲ್ಲ ಕಡೆಗಣಿಸು, ನನ್ನನ್ನೇ ಪರಿಗಣಿಸು

ನನ್ನುಳಿಸು, ಉದ್ಧರಿಸು, ಕೊಡು ನೀ ಒಲವಿಗೆ ನೆಲೆ

ಚಂದ ಅವಳ ಕಿರು ಲಜ್ಜೆ, ಮಧುರ ಬೆಳ್ಳಿ ಮಣಿ ಗೆಜ್ಜೆ

ಶ್ವಾಸ ಏರಿ, ಇಳಿದು, ಸುತ್ತಲಿನ ಜಗವನೇ ಮರೆಯುತಿದೆ

ಒಲವ ಒನಕೆಯಡಿ ನೂಕಿ, ಹೃದಯ ಬಿರಿಯುವುದು ಬಾಕಿ

ಅವಳ ಕಣ್ಣ ಸಿಡಿಲು ಬಡಿದು ನನ್ನ ಧ್ವನಿ ಅದು ನಡುಗುತಿದೆ

ಕಳೆದಂತ ಕನಸುಗಳು, ಮರೆತಂತ ಮಿಡಿತಗಳು

ತರ -ತರದ ನಿನ್ನ ತರಗತಿಯಲ್ಲಿ ಹಾಜರಿ ಹಾಕುತಿದೆ

ಚಂದ, ಲಾ-ಲಾ, ಲಾ-ರಾ, ರಾ-ನಾ

ಲಾ, ರಾ, ಲಾ, ಲಾ-ಲಾ, ಲಾ-ರಾ, ರಾ-ನಾ

ಲಾ, ರಾ, ಲಾ, ನಾ, ನಾ, ನಾ-ರಾ-ನಾ

ಸುತ್ತಲಿನ ಜಗವನೇ ಮರೆಯುತಿದೆ

- It's already the end -