00:00
04:30
There are no similar songs now.
ಹೀಗೂ ಇರಬಹುದೆ ನಿನ್ನ ನೋಡದೆ?
ಹೀಗೂ ಇರಬಹುದೆ ಉಸಿರಾಡದೆ?
ಹೀಗೂ ಇರಬಹುದೆ ಅಸುನೀಗದೆ?
ಹೀಗೂ ಇರಬಹುದೆ ನಾ ಬರಲಾಗದೆ?
♪
ಹೀಗೂ ಇರಬಹುದೆ ನಿನ್ನ ನೋಡದೆ?
♪
ಉಸಿರಾಟದ ಸದ್ದು ಕೆಡಿಸುತಿದೆ ನನ್ನ ಧ್ಯಾನ
ನಾ ಸೋಲುವ ಮೊದಲೇ ಕೊನೆಯಾಗಲಿ ನನ್ನ ಪ್ರಾಣ
ದೂರ ಹೋಗದಿರು ಭಯವಾಗಿದೆ
ಹೇಗೆ ಬದುಕಿರಲಿ ಗುರಿ ಸೇರದೆ?
ಹಾಳು ಯುಗದಲ್ಲಿ ಪ್ರೀತಿ ಮಾಡಿದೆ
ಏಳೂ ಬಣ್ಣಗಳು ಬದಲಾಗಿದೆ
♪
ಹೀಗೂ ಇರಬಹುದೆ ನಿನ್ನ ನೋಡದೆ?
♪
ನನ್ನೊಳಗಿನ ಮೌನ ಕೊನೆಯಿರದ ದೂರಯಾನ
ನಾ ಬರೆಯುವ ಮೊದಲೇ ಕೆಡಿಸದಿರು ನನ್ನ ಕವನ
ಹೇಗೆ ಈಜಿದರೂ ದಡ ಕಾಣದೆ
ಏಳು ಬೀಳುಗಳ ಸುಳಿ ಸೇರಿದೆ
ಬಾಳು ಮುಳುಗಿರುವ ಹಡಗಾಗಿದೆ
ಅಲೆಯಾಸದ್ದಲ್ಲೂ ನಾ ದನಿ ಕೇಳಿದೆ
ಹೀಗೂ ಇರಬಹುದೆ ನಿನ್ನ ನೋಡದೆ?
ಹೀಗೂ ಇರಬಹುದೆ ಉಸಿರಾಡದೆ?
ಹೀಗೂ ಇರಬಹುದೆ ಅಸುನೀಗದೆ?
ಹೀಗೂ ಇರಬಹುದೆ ನಾ ಬರಲಾಗದೆ?