00:00
04:45
ನೀ ಅಮೃತಧಾರೆ ಕೋಟಿ ಜನುಮ ಜತೆಗಾತಿ
ನೀ ಅಮೃತಧಾರೆ ಇಹಕು ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲಿ
ಹೇ ಪ್ರೀತಿ ಹುಡುಗ ಕೋಟಿ ಜನುಮ ಜತೆಗಾರ
ಹೇ ಪ್ರೀತಿ ಹುಡುಗ ನನ್ನ ಬಾಳ ಕಥೆಗಾರ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ
ಹೇ ಪ್ರೀತಿ ಹುಡುಗ
♪
ನೆನಪಿದೆಯೇ ಮೊದಲಾ ನೋಟ
ನೆನಪಿದೆಯೇ ಮೊದಲಾ ಸ್ಪರ್ಶ
ನೆನಪಿದೆಯೇ ಮತ್ತನು ತಂದಾ ಆ ಮೊದಲ ಚುಂಬನ
ನೆನಪಿದೆಯೇ ಮೊದಲಾ ಕನಸು
ನೆನಪಿದೆಯೇ ಮೊದಲಾ ಮುನಿಸು
ನೆನಪಿದೆಯೇ ಕಂಬನಿ ತುಂಬಿ ನೀ ನಿಟ್ಟ ಸಾಂತ್ವನ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ
ನೀ ಅಮೃತಧಾರೆ ಕೋಟಿ ಜನುಮ ಜತೆಗಾತಿ
ನೀ ಅಮೃತಧಾರೆ ಇಹಕು ಪರಕು ಸಂಗಾತಿ
ನೀ ಅಮೃತಧಾರೆ
♪
(Regulate your
Regulate your
Regulate your mind
Regulate your body
Regulate your mind
Regulate your body, body, body, body, body)
♪
ನೆನಪಿದೆಯೇ ಮೊದಲಾ ಸರಸ
ನೆನಪಿದೆಯೇ ಮೊದಲಾ ವಿರಸ
ನೆನಪಿದೆಯೇ ಮೊದಲು ತಂದ ಸಂಭ್ರಮದ ಕಾಣಿಕೆ
ನೆನಪಿದೆಯೇ ಮೊದಲ ಕವನ
ನೆನಪಿದೆಯೇ ಮೊದಲ ಪಯಣ
ನೆನಪಿದೆಯೇ ಮೊದಲ ದಿನದ ಭರವಸೆಯ ಆಸರೆ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ
ಹೇ ಪ್ರೀತಿ ಹುಡುಗ ಕೋಟಿ ಜನುಮ ಜತೆಗಾರ
ನೀ ಅಮೃತಧಾರೆ ಇಹಕು ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲಿ
ನೀ ಅಮೃತಧಾರೆ