00:00
05:05
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು
♪
ಶ್ರೀಗಂಧ ಈ ಗೊಂಬೆ ಇವಳಿಗೇಕೆ ಗಂಧವೋ
ಬಂಗಾರ ಈ ಹೆಣ್ಣು ಇವಳಿಗೇಕೆ ಒಡವೆಯೋ
ತಾರೆಗೆ ಈ ತಾರೆಗೆ
ಈ ತಾರೆಗೇಕೆ ಮಿನುಗು ದೀಪವು
ಈ ಬೆಳಕಿಗೇಕೆ ಬಿರುಸು ಬಾಣವೋ
ಕೆನ್ನೆ ಮೇಲೆ ಸೇಬಿದೆ
ಅಲ್ಲೇ ಗಿಣಿಯ ಮೂಗಿದೆ
ತೊಂಡೆ ಹಣ್ಣು ತುಟಿಯಲಿ
ದಾಳಿಂಬೆ ಕಾಳು ಬಾಯಲಿ
ಏನಿದು ಏನು ಮೋಜಿದು
ಏನಿದೇನು ಮೋಜಿದು
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು
♪
ದಯಮಾಡಿ ಮುಗಿಲಾಚೆ ಸ್ವಲ್ಪ ನೋಡಿ ಎಲ್ಲರೂ
ಸಾಲಾಗಿ ಮುಕ್ಕೋಟಿ ದೇವರುಗಳು ನಿಂತರು
ದೇವತೆ ಈ ದೇವತೆ
ಈ ದೇವತೆಯ ಚೆಲುವ ನೋಡಲು
ಈ ಮಾಯಗಾತಿ ನಗುವ ಕಲಿಯಲು
ನೋಡಲಿವಳು ಹುಣ್ಣಿಮೆ
ಬಿರಿಯಲಿವಳು ನೈದಿಲೆ
ಚಿಗುರು ಮಾವು ಬಯಸಿದೆ
ಒಳಗೆ ಕುಹೂ ದನಿ ಇದೆ
ಏನಿದು ಏನು ಮೋಜಿದು
ಏನಿದೇನು ಮೋಜಿದು
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು