background cover of music playing
Sangathi Neenu - From "Preethi Nee Illade Naa Hegirali" - L.N. Shastri

Sangathi Neenu - From "Preethi Nee Illade Naa Hegirali"

L.N. Shastri

00:00

05:01

Similar recommendations

Lyric

ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ

ನನ್ನಿಂದ ನೀನು ಬೇರಾದ ಮೇಲೆ ನೆನಪೊಂದೇ ಬದುಕಾಗಿದೆ

ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗೆ ಕಾಯುವೆ

ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೇ

ಪರಶಿವನಿಗೂ ಮತ್ಸರವು ಬಂತು ನೋಡು

ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೇ

ಪರಶಿವನಿಗೂ ಮತ್ಸರವು ಬಂತು ನೋಡು

ಹುಣ್ಣಿಮೆ ಮಗಳೋ, ತಂಪಿನ ತವರೋ

ಚೆಲುವಿಗೆ ನಿಧಿಯೋ, ಒಲವಿನ ಸುಧೆಯೋ

ನೀನಿಲ್ಲದೆ ಈ ಕಂಗಳು ಮಂಜಾದವು

ಓ ನಲ್ಲೇ ನಿನ್ನ ಸಹಚಾರದಲ್ಲಿ

ಎಂದೆಂದೂ ಸಿಗದ ಸವಿ ಜೇನ ಕಂಡೆ

ಮರುಳಾಗಿ ಮಾಡಿ ಮರೆಯಾದೆ ಯಾಕೆ

ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ

ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗೆ ಕಾಯುವೆ

ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ

ಕಣ್ಣಿಟ್ಟರೆ ಕರಗಿದೆನು ಮುತ್ತಿಟ್ಟರೆ ಬೆರಗಿದೆನು

ಕೈ ಬಿಟ್ಟರೆ ಬಾಳೆಲ್ಲಿದೆ ಹೇಳೆ ಹೂವೆ

ದುಖ: ಅನ್ನೋ ದೋಣಿ ಮೇಲೆ ನಿನ್ನ ನಾನು ಸೇರೋದೆಲ್ಲೆ

ನಕ್ಕಂತಿರೋ ನಕ್ಷತ್ರವು ನೀನಲ್ಲವೇ

ಓ ಚೆನ್ನೆ ನಿನ್ನ ನೆನಪಲ್ಲಿ ನಾನು

ಬಾಳೋದು ಬಲ್ಲೆ ಯುಗವಾದರೇನು

ಪ್ರೀತಿಗೆ ಒಂದು ಕಥೆಯಾದೆ ನಾನು

ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ

ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗೆ ಕಾಯುವೆ

ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ

ಬದುಕೆಲ್ಲ ಬರಿದಾಗಿದೆ

- It's already the end -