00:00
03:15
ಈ ಹಾಡಿಗೆ ಪ್ರಸ್ತುತ ಯಾವುದೇ ಸಂಬಂಧಿತ ಮಾಹಿತಿ ಲಭ್ಯವಿಲ್ಲ.
ಓ ಸಂಜೆಯ ಹೂವೇ
ಬೆಳದಿಂಗಳಾಸೆ ಬಿಡು
ನಾ ಹಚ್ಚಿದ ಹಣತೆ
ನನ್ನುಸಿರೆ ಆರಿಸಿದೆ
ನಾ ಸಾಕಿದ ಮುನಿಸು
ನನ್ನನ್ನೇ ಕೊಲ್ಲುತಿದೆ
ನಾ ತುಳಿದ ಪದಿಯು
ವೈರುಧ್ಯ ದಿಕ್ಕಲಿ ತಿರುಗಿವೆ
ಬಿರುಕು ಬಿರುಕಿದ ಶಿಲೆಗೂ
ಪೂಜೆಯ ಬಯಕೆಯು ಬಿರಿದಿದೆ
ಹನಿಯು ಮರೆದನಿಯು
ಕೊರಗುತ ಉದುರಿದೆ
ಹಚ್ಚೆಯಾದ ಹಣೆ ಬರಹಕೆ
ಚುಚ್ಚಿದ ಶಾಹಿಯು ನಮ್ಮದೆ
ಒಲವ ಚಿತೆಯ ಹೊಗೆಯಲಿ
ಘಮಿಸಿದೆ ಎಕಾಂತ
♪
ಈ ಕಣ್ಣಿರ ಹನಿಗೆ
ನನ್ನಿಂದ ಬೀಳ್ಕೊಡುಗೆ
ಈ ಎದೆಯ ಭಾರ
ಆ ದುಃಖವಿನ್ನು ನಿರಂತರ
ನಾ ಹೊರಟ ತೀರ
ಕಣ್ಣೀರ ನಿಲ್ದಾಣ
ಈ ಜೀವನ ಸಾರ
ಉಸಿರಾಟವೇ ದಾರುಣ
ಬರಹ ವಿಧಿ ಬರಹ
ಏರು ಪೇರು ಬರೆದರು
ತರಹ ತರ ತರಹ
ದಿಕ್ಕಾಪಾಲು ಆದೆನು
ಸಿಗದೆ ಹೋದರೆ ನೀನು
ಕಣ್ಣೊಳಗೆ ನೀರಾಗುವೆ
ಬಚ್ಚಿಟ್ಟ ನನ್ನ ಕನಸಿಗೆ
ಕಪ್ಪು ಮಸಿಯ ಬಳಿಯುವೆ