00:00
05:32
'ನಿಜಾನಾ ನಾನೇನ' ಹಾಡನ್ನು ಪ್ರಸಿದ್ದ ಗಾಯಕ ಸೋನು ನೀಗಮ್ ಅವರಿಂದ ಕನ್ನಡ ಚಲನಚಿತ್ರ 'ಚೇಲುವಿನ ಚಿಲಿಪಿಲಿ'ಗಾಗಿ ಹಾಡಲಾಗಿದೆ. ಈ ಹಾಡಿನ ಸಂಗೀತವನ್ನು ಕಮತ್ ಶೆಟ್ಟಿ ರಚಿಸಿದ್ದಾರೆ ಮತ್ತು ಕವಿತೆಯನ್ನು ವಿವೇಕ್ ಜಯರಾಜ್ ಬರೆದಿದ್ದಾರೆ. ಹಾಡಿನ უმელ ಲಯ ಮತ್ತು ಸೋನು ನೀಗಮ್ನದ ಮನೋಹರ ವಾಯ್ಸ್ ಪ್ರೇಕ್ಷಕರ ಹೃದಯವನ್ನು ಗೆದ್ದಿದೆ. 'ಚೇಲುವಿನ ಚಿಲಿಪಿಲಿ' ಚಿತ್ರದ ಈ ಹಾಡು, ಚಲನಚಿತ್ರದ ಸಂಭ್ರಮವನ್ನು ಹೆಚ್ಚಿಸುವಂತೆಬೇಕು ಮತ್ತು ಸಂಗೀತ ಪ್ರೇಮಿಗಳಿಗೆ ಬಹುಮಾನವಾಗಿ ಸ್ವೀಕರಿಸಲಾಗಿದೆ.
ನಿಜನಾ ನಾನೇನಾ
ನಿನ್ನ ಜೊತೆ ಜೊತೆಯಾಗಿರುವೆ
ಇದೆಲ್ಲಾ ಪ್ರೇಮನಾ
ನನ್ನ ಮನಸನು ಕೇಳಿರುವೆ
ನನ್ನ ಎದೆಯಲಿ ಯಾರೋ
ಕಚಗುಳಿ ಇಡುವ ಹಾಗೆ
ಬೆನ್ನ ಹಿಂದೆ ಯಾರೋ ನಿಂತು ನಿನ್ನೆಡೆ ದೂಡಿದ ಹಾಗೆ
ಅರೆ ಅರೆ ಅರೆ ಉಸಿರಲಿ ವೇಗ
ಎಂಥಾ ಹೊಸ ಹೊಸ ಸಿಹಿ ಸುಖ ಈಗ
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ
ಅರೆ ಅರೆ ಅರೆ ಉಸಿರಲಿ ವೇಗ
ಎಂಥಾ ಹೊಸ ಹೊಸ ಸಿಹಿ ಸುಖ ಈಗ
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ
ನಿಜನಾ ನಾನೇನಾ
ನಿನ್ನ ಜೊತೆ ಜೊತೆಯಾಗಿರುವೆ
ಇದೆಲ್ಲಾ ಪ್ರೇಮನಾ
ನನ್ನ ಮನಸನು ಕೇಳಿರುವೆ
♪
ಈ ವಯಸ್ಸಿಗೆ ದಿನ ದಿನ ಹೊಸ ವಸಂತ
ಈ ಮನಸ್ಸಿಗೆ ಪ್ರತಿಕ್ಷಣ ನೀನೇ ಪ್ರಪಂಚ
ಈ ಉಲ್ಲಾಸಕೆ ಉತ್ಸಾಹಕೆ ನೀನೇ ಮುಹೂರ್ತ
ಬುಗುರಿಯ ಹಾಗೆ ತಿರುಗುವ ಮನಸು
ನೆನಪಿಗೆ ಬಾರದ ಸಾವಿರ ಕನಸು
ಚೆಲುವಿನ ಚಿಲಿಪಿಲಿ ಎರಡು ಹೃದಯದಿ ಸುಂದರ ಅನುಭವವೂ
ನಿಜನಾ ನಾನೇನಾ
ನಿನ್ನ ಜೊತೆ ಜೊತೆಯಾಗಿರುವೆ
ಇದೆಲ್ಲಾ ಪ್ರೇಮನಾ
ನನ್ನ ಮನಸನು ಕೇಳಿರುವೆ
♪
ಈ ಮನಸ್ಸಲಿ ಆಸೆ ಇತ್ತು ಗೊತ್ತೆ ಇರ್ಲಿಲ್ಲ
ಈ ವಯಸ್ಸಲಿ ಪ್ರೀತಿ ಬರೋ ಸುಳಿವೆ ಇರ್ಲಿಲ್ಲ
ನಾ ನಿನ್ನ ಕಾಣೋ ಮೊದ್ಲು ನಂಗೆ ಏನು ತಿಳ್ದಿಲ್ಲ
ನನ್ನಲಿ ನಾನು ಕಳೆದೆ ಹೋದೆ
ನಿನ್ನಲಿ ಎಂದೊ ಬೆರೆತು ಹೋದೆ
ಒಲವಿನ ಚಿಲಿಪಿಲಿ ಎರಡು ಹೃದಯದಿ ಸುಂದರ ಸುಖಮಯವೂ
ನಿಜನಾ ನಾನೇನಾ
ನಿನ್ನ ಜೊತೆ ಜೊತೆಯಾಗಿರುವೆ
ಇದೆಲ್ಲಾ ಪ್ರೇಮನಾ
ನನ್ನ ಮನಸನು ಕೇಳಿರುವೆ
ನನ್ನ ಎದೆಯಲಿ ಯಾರೋ
ಕಚಗುಳಿ ಇಡುವ ಹಾಗೆ
ಬೆನ್ನ ಹಿಂದೆ ಯಾರೋ ನಿಂತು ನಿನ್ನೆಡೆ ದೂಡಿದ ಹಾಗೆ
ಅರೆ ಅರೆ ಅರೆ ಉಸಿರಲಿ ವೇಗ
ಎಂಥಾ ಹೊಸ ಹೊಸ ಸಿಹಿ ಸುಖ ಈಗ
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ
ಅರೆ ಅರೆ ಅರೆ ಉಸಿರಲಿ ವೇಗ
ಎಂಥಾ ಹೊಸ ಹೊಸ ಸಿಹಿ ಸುಖ ಈಗ
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ