background cover of music playing
Ninna Manevaregu - Badri Prasad

Ninna Manevaregu

Badri Prasad

00:00

05:04

Similar recommendations

Lyric

Hai, ನನ್ ಹೆಸರು ವಿನೋದ್ ನಿನ್ ಹೆಸರೇನು?

ಓ ದಿವ್ಯಾನ?

ಚೆನ್ನಾಗಿದೆ

ಹಾ coffee ನಾ? canteen ಗಾ? ಆಮೇಲೆ ಬರ್ತೀನಿ

ಸರಿನಾ?

ನಿಮ್ಮನೆ ಎಲ್ಲಿ??

ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ

ನನ್ನ ಕೊನೆವರೆಗೂ ಮನದಲಿ ನಾನು ಇರಬಹುದೇ

ವಿಶೇಷವಾಗಿದೆ ಈ ಬಡಪಾಯಿಯ ಖುಷಿಯಾ ಈ ಮಿಡಿತ

ನಿನ್ನ ನೋಡುತ ನಾ ಮೂಕ ವಿಸ್ಮಿತ

ಮೋಹಗೊಳ್ಳುತ ನಾ ಮೂಕ ವಿಸ್ಮಿತ

ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ

ಭಾವ ಬುದ್ದಿ ಹಂಚುವಾಗ ಜೀವವೇ ಹೂವು

ನೀನು ಬಂದು ಹೋದಲೆಲ್ಲ ಪ್ರೀತೆಯ ಕಾವು

ಕಾಡುವಂಥ ಈ ಮೋಹ ದಾಹಗಳ ಹೇಳಲೇ ಬೇಕೇ

ಕೂಡಿ ಬಂದ ಈ ವಿವಿದ ವೇದನೆಯ ತಾಳಲೇ ಬೇಕೇ

ಮಾತನಾಡುತ ನಾನು ಮೂಕ ವಿಸ್ಮಿತ

ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ

ನನ್ನ ಕೊನೆವರೆಗೂ ಮನದಲಿ ನಾನು ಇರಬಹುದೇ

ಏಕೋ ಏನೋ ನಿಲ್ಲುತ್ತೇನೆ ಕನ್ನಡಿಯ ಮುಂದೆ

ಆದರೂನೂ ಅಲ್ಲಿ ಕೂಡ ನಿನ್ನನೇ ಕಂಡೆ

ನೂರು ಬಾರಿ ಬರೆದು ಹರಿದಿರುವ ಕಾಗದ ನಾನು

ಒಮ್ಮೆ ಬಂದು ಈ ತೆರೆದ ಹೃದಯವನು ಓದುವೆ ಏನು?

ಪ್ರೀತಿ ಮಾಡುತ ನಾನು ಮೂಕ ವಿಸ್ಮಿತ

ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೇ

ನನ್ನ ಕೊನೆವರೆಗೂ ಮನದಲಿ ನಾನು ಇರಬಹುದೇ

ವಿಶೇಷವಾಗಿದೆ ಈ ಬಡಪಾಯಿಯ ಖುಷಿಯಾ ಈ ಮಿಡಿತ

ನಿನ್ನ ನೋಡುತ ನಾ ಮೂಕ ವಿಸ್ಮಿತ

ಮೋಹಗೊಳ್ಳುತ ನಾ ಮೂಕ ವಿಸ್ಮಿತ

- It's already the end -