00:00
03:23
ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ
ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ
ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ
ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ
♪
ಎಲೆ ಎಲೆಗಳ ಮೇಲೆಲ್ಲ ಹನಿಗವಿತೆಯ ಸಾಲು
ಮಲೆನಾಡೆ ಹೊತ್ತಿರಲು ಬಿಳಿ ಹಿಮದ ಶಾಲು
ಶೃಂಗಾರದ ಮನಸುಗಳಲಿ ಬಣ್ಣಗಳ ಕನಸು
ಗಿರಿ ತುದಿಯಲಿ ರಂಗೆರೆಚೊ ಮಳೆಬಿಲ್ಲಿಗೂ ಮುನಿಸು
ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ
ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ
♪
ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ
♪
ಕಣಿವೆಯ ಇಳಿಜಾರಿನಲಿ ತಲೆದೂಗುವ ಜಾಜಿ
ಜೋಗುಳ ತಾನಾಗಿರಲು ದುಂಬಿಗಳ ಜೀಜಿ
ಮಿಡಿವೆದೆಗಳ ಪಿಸುಮಾತು ಕವಿಗರಿಯದ ಕವನ
ಮಳೆ ನಿಂತರು ಮುಗಿದಿಲ್ಲ ಕೊನೆಯಿಲ್ಲದ ಪಯಣ
ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ
ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ
♪
ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ