00:00
02:04
ಕರೆಯೋಲೆ ಕರೆವಾ ಓಲೆ, ಕರೆಮಾಡಿ ಕರೆದೋಲೆ
ಕರದಲ್ಲಿ ಕಲಮ ಹಿಡಿದು ಕರಿಶಾಯಿ ಬರೆದೋಲೆ
ಕಲ್ಲಿನ ಕೊಳಲಲಿ ಕಲರವ ನುಡಿಸಿ ಕೈಯನು ಬೀಸಿ ಕರದೋಳೆ
ಕಣ್ಣಿಗೆ ಕಾಣದ ಕಾಗದದಲ್ಲಿ ಕುಂಚದಿ ಕಾವ್ಯವ ಕೊರೆದೋಳೆ
ಕರೆಯೋಲೆ ಕರೆವಾ ಓಲೆ ಕರೆಮಾಡಿ ಕರೆದೋಲೆ
♪
ಕನಕಾಂಗಿ ಕೈಯಲ್ಲೊಂದು ಕಂಚೀನ ಕೊಡಪಾನ
ಕೆರೆನೀರ ಕುಡಿಯೋದಕ್ಕೂ ಕಟುವಾದ ಕಡಿವಾಣ
♪
ಕೆರೆದಂಡೆ ಕಡೆಯಲ್ಲೆಲ್ಲೊ ಕುಂತೋನೆ ಕಡುಜಾಣ
ಅತಿಕ್ಷೀಣ ಸ್ಮೃತಿಯುಳ್ಳೋನ ಕೆಂದಾವರೆ ಲಕುಶಣ
ಕೆಂಪಾದ ಕಮಲ ಕಂಡು ಕೆಸರಲ್ಲೆ ಕಲೆತೋಳೆ
ಕ್ಷಣವೆಲ್ಲ ಕೃತಕ ಕಥೆಯಲಿ ಕಳೆಯೋದ ಕಲಿತೋಳೆ
ಕಲ್ಲಿನ ಕೊಳಲಲಿ ಕಲರವ ನುಡಿಸಿ ಕೈಯನು ಬೀಸಿ ಕರೆದೋಳೆ
ಕಣ್ಣಿಗೆ ಕಾಣದ ಕಾಗದದಲ್ಲಿ ಕುಂಚದಿ ಕಾವ್ಯವ ಕೊರೆದೋಳೆ
ಕರೆಯೋಲೆ ಕರೆವಾ ಓಲೆ ಕರೆಮಾಡಿ ಕರೆದೋಲೆ
ಕರದಲ್ಲಿ ಕಲಮ ಹಿಡಿದು ಕರಿಶಾಯಿ ಬರೆದೋಲೆ