00:00
03:22
ಈ ಕಣ್ಣಿನ ಜಲಪಾತದ ಮೇಲೆ ನಿಂತು
ಹಾಡುತಿದೆ ಈ ಹೃದಯ ಜೋಕಾಲಿ
ಅತೀ ಸುಂದರ ಅತೀ ಮೌನದ ಸೆಳೆತಕೆ ಸೋತು
ಹಿಂಬಾಲಿಸಿದೆ ಹರೆಯ ಖಾಲಿಗೈಯಲ್ಲಿ
ನೀನ ಸಂಘ ಅತಿರೋಚಕ
ಪ್ರತಿ ಗನಸಾ ನೀ ಮಾಲಿಕ
ಸಿಕ್ಕಿಹುದು ನನಗೀಗ ಪಾರಿತೋಷಕ
ಅಭಿಮಾನಿ ನಾ ನಿನಗೆ ವಿದೂಷಕ
ನಾ ನಿನಗೆ ಕಾವಲುಗಾರ
ಕಾಯುವೆನು ಜನುಮ ಪೂರ
ನಾ ನಿನಗೆ ಕಾವಲುಗಾರ
ಕಾಯುವೆನು ಜನುಮ ಪೂರ
ಸಿಕ್ಕಿಹುದು ನನಗೀಗ ಪಾರಿತೋಷಕ
ಅಭಿಮಾನಿ ನಾ ನಿನಗೆ ವಿದೂಷಕ
♪
ಹಿತಿಹಾಸದ ಪುಟದ ಒಳಗೆ ಇರಬಹುದು ಒಂದು ನಂಟು
ಪ್ರತಿ ಘಳಿಗೆಗೂ ಒಂದು ಚೂರು ಅಪ್ಪುಗೆಯ ಸೆಳೆತ ಉಂಟು
ಸಾಟಿ ಇಲ್ಲದ ನೋಟದ ದಾಟಿ ನಿನ್ನದು
ಭೇಟಿ ಆಗಲು ಕಾಯುವ ಮನಸು ನನ್ನದು
ಬದಲಾಗಿದೆ ದಿನಚರಿ ಬೇಕು ನಿನ್ನ ಹಾಜರಿ
ಈ ಹೃದಯಕೆ ನೀನೆಂದಿಗೂ ರಾಯಭಾರಿ
ಸಿಕ್ಕಂಗೆ ಆಗಿಹುದು ಪಾರಿತೋಷಕ
ಅಭಿಮಾನಿ ನಾ ನಿನಗೆ ವೀಕ್ಷಕ
ನೀ ನನಗೇ ಕಾವಲುಗಾರ
ಚಿರಋಣಿಯು ಜನುಮ ಪೂರ
ಬಿಟ್ಟಿರಲು
(ಬಿಟ್ಟಿರಲು)
ಆಗದು ದೂರ
(ಆಗದು ದೂರ)
ಕಲಿಸಿ ಕೊಡು ಪ್ರೀತಿಯ ಸಾರ