00:00
04:34
ಯಾರೋ ಇವನು ಜೋಕುಮಾರ ಕಣ್ಣಲೇ ನಿಂತ
ಯಾರೋ ಇವನು ಮಾಯಗಾರ ಯಾರಿಗೆ ಸ್ವಂತ
ಸಾವಿರ ಆಲೋಚನೆ ಮೌನವೇ ಸಂಭಾಷಣೆ
ಯಾರೋ ಯಾರೋ ಕಾಣೆ
ಯಾರಿವನು ಯಾರಿವನು
ಯಾರಿವನು ಯಾರಿವನು
ಇವನ್ಯಾರ ಮಗನೋ ಕಾಣೆ ನಾ ಕಾಣೆ
ಹೆಸರೇನೋ ಹೆಸರೇನೋ
ಯಾವೂರನಾಯಕನೋ
ಜೊತೆಗಾರನಾಗುವನೋ ಕಾಣೆ ನನ್ನಾಣೆ
ಎದೆ ಬಡಿತ ಯಾತಕೋ ತಾಳ ತಪ್ಪಿದೆ ಇಂದು ಇವನ ನೋಡಿ
ಇದೇನು ಸೂಚನೆ
ಇದೆಂಥ ಯೋಚನೆ
ಹೊಸದಾದ ದಿಗಿಲು ಯಾಕೋ ಕಾಣೆ
ತುಟೀಲಿ ಕಂಪನ
ಎದೇಲಿ ತಲ್ಲಣ
ಬಹಳಾನೇ ಇಷ್ಟ ದೇವರಾಣೆ
ಯಾರಿವನು ಯಾರಿವನು
ಯಾರಿವನು ಯಾರಿವನು
ಇವನ್ಯಾರ ಮಗನೋ ಕಾಣೆ ನಾ ಕಾಣೆ
♪
ಕಾಲ್ಗಳು ಯಾತಕೋ ದಾರಿಯ ತಪ್ಪಿದಂತೆ ಆತನ ಹಿಂದೆಯೇ ಸಾಗಿದೆ ಸಾಗಿದೆ
ರಾತ್ರಿ ಆದರೆ ಚಂದ್ರನಾಗಿ ಕಂಬಳೀಲಿ ಬಂದ
ಹಗಲು ಬಂದರೆ ನನ್ನ ಸುತ್ತಲೂ ಹಾಲು ಬೆಳಕೇ ಆದ
ಪೂರ್ವಾ ಪರಮೇ ಇಲ್ಯಾರಿಗೂ ತಿಳಿದಿಲ್ಲ
ಪೂರ್ವ ಸೂರ್ಯ ಬಂದಂತೆ ಬಂದಿರುವ
ಖುಷಿಯೊಂದೇ ಹಂಚಲು ಸ್ನೇಹಿ ಎನ್ನುವ ರೂಪದಲ್ಲಿ ಬಂದ
ಇದೇನು ಸೂಚನೆ
ಇದೆಂಥ ಯೋಚನೆ
ಹೊಸದಾದ ದಿಗಿಲು ಯಾಕೋ ಕಾಣೆ
♪
ಬಂಧು ಹಾಗೆ ಕಣ್ಣಾನೀರ ತಡೆಯೋಕೆ ಬಂದ
ಕೂಲಿ ಹಾಗೆ ನಮ್ಮ ಭಾರ ಹೊರುತಾನೆ
ಸ್ನೇಹ ಎಂದರೆ ಹಾಲು ಜೇನು ಎಂಬ ಸತ್ಯವನ್ನು ಈ ಹುಡುಗನು ತೋರಿದ
ಎಂದೂ ಬರೆದ ಋತುವಂತೆ ತಂದವನು
ಎಲ್ಲಾ ಗೆಲ್ಲೋ ಚೇತರಿಕೆಯ ತಂದವನು
ನಮ್ಮೊಳಗೆ ತುಂಬಿದ ಎಲ್ಲ ಉತ್ತರ, ಆದರೆ ಇವನೇ ಪ್ರಶ್ನೆ
ಯಾರಿವನು ಯಾರಿವನು
ಯಾರಿವನು ಯಾರಿವನು
ಇವನ್ಯಾರ ಮಗನೋ ಕಾಣೆ ನಾ ಕಾಣೆ
ಹೆಸರೇನೋ ಹೆಸರೇನೋ
ಯಾವೂರನಾಯಕನೋ
ಜೊತೆಗಾರನಾಗುವನೋ ಕಾಣೆ ನನ್ನಾಣೆ