background cover of music playing
Tajaa Samachara - Male - Jithin Raj

Tajaa Samachara - Male

Jithin Raj

00:00

04:49

Similar recommendations

Lyric

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ

ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ

ಹೃದಯದಗದೀ ನಾಜೂಕು

ಕೊಡುವೆನು ಕಿವಿಯಲಿ ವರದಿ

ಗುಣಪಡಿಸಲು ನೀ ಬೇಕು

ಬರುವುದೇ ನನ್ನಯ ಸರದಿ

ಎದೆಗೊರಗಿ ಆಲಿಸಿ ಚೆಲುವೆ ಮಾಡಿಬಿಡು ತಪಾಸಣೆ ಶುರು

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ

ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ

ಜೊತೆ ನಿಲ್ಲುತ್ತಾ ಕೂರುತ್ತಾ ನಿನ್ನೊಂದಿಗೆ

ಸಖಿ ನಾನಾಗುವೆ ನಿಪುಣ

ಕನಸೆಂಬ ಖಜಾನೆ ಇಗೋ ತುಂಬಿದೆ

ತುಸು ದೂರದರೂ ಕಠಿಣ

ಘಮ ಘಮಿಸಿ ಕವಿದ ಹೆರಳಲ್ಲೀಗ

ಕಳೆದೋಗೋದೆ ಪರಮಾನಂದ

ಅರೆ ಬಿರಿದು ನಗುವ ಸಿಹಿ ಹೂವಂತೆ

ಪಿಸು ಮಾತಾಡು ತುಸು ಜೋರಿಂದ

ಮನ ಈಗಾಗಲೇ ತೆರೆದೋದುತ್ತಿದೆ

ಬರೆಯದಿರುವ ಕಾಗದ

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ

ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ

ನನ್ನ ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿಕೋ

ನಿನ್ನ ಮುದ್ದಾಗಿರೋ ನಿಲುವು

ಬರಿದಾದಂತ ಬಾಳಲ್ಲಿ ಬಂದಂತಿದೆ

ಬಲು ರೋಮಾಂಚಕ ತಿರುವು

ಗರಿಗೆದರಿ ಸನಿಹ ಕುಣಿದಾಡುತ್ತಾ

ಮನ ತಂತಾನೇ ನವಿಲಾದಂತೆ

ಅವಿತಿರುವ ಒಲವು ಬಯಲಾಗುತ್ತಾ

ಕ್ಷಣ ಇನ್ನಷ್ಟು ನವಿರಾದಂತೆ

ಪುಟ ಅಚ್ಚಾಗಿದೆ ಪತ ಹೆಚ್ಚಾಗಿದೆ

ಎದುರೇ ಇರಲು ದೇವತೆ

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ

ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ

ಹೃದಯದಗದೀ ನಾಜೂಕು

ಕೊಡುವೆನು ಕಿವಿಯಲಿ ವರದಿ

ಗುಣಪಡಿಸಲು ನೀ ಬೇಕು

ಬರುವುದೇ ನನ್ನಯ ಸರದಿ

ಎದೆಗೊರಗಿ ಆಲಿಸಿ ಚೆಲುವೆ ಮಾಡಿಬಿಡು ತಪಾಸಣೆ ಶುರು

- It's already the end -