background cover of music playing
Bhale Bhale Chandadha - S. P. Balasubrahmanyam

Bhale Bhale Chandadha

S. P. Balasubrahmanyam

00:00

05:27

Similar recommendations

Lyric

ಎಲ್ಲಾ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆಯಿದೆ

ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ

ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

ನಿನ್ನ ಚಂದ ಹೊಗಳಲು ಪದ ಪುಂಜ ಸಾಲದು

ನಿನ್ನ ಕಂಗಳ ಕಾಂತಿಗಳಿಂದಾನೆ ತಾನೇನೆ ಊರೆಲ್ಲ ಹೊಂಬೆಳಕು

ನೀನು ಹೆಜ್ಜೆಯೇ ಇಟ್ಟಲ್ಲಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು

ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೆ

ನಿನ್ನ ಈ ಸರಿಗಮ ಕೇಳಿತು ಸಮಸಮ ಹಂಚಿತು

ಝುಳುಝುಳು ನೀರಿಲ್ಲಿ ತಿಲ್ಲಾನ ಹಾಡಿತು ನೋಡೋಕೆ ನಾ ಬಂದರೆ

ನಿನ್ನದೇ ತಕಥೈ ಕಂಡಿತು ತಕದಿಮಿ ಹೆಚ್ಚಿತು

ಅಲ್ಲೊಂದು ಸುಂದರ ತೋಟವಿದೆ, ಅಲ್ಲಿ ನೂರಾರು ಹೂಗಳ ರಾಶಿಯಿದೆ

ಇಲ್ಲೊಂದು ಪ್ರೀತಿಯ ಹಾಡು ಇದೆ, ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇವೆ

ಎಲ್ಲ ಸಾಲಲ್ಲು ಇಣುಕೋ ಅಕ್ಷರ ನಿಂದೇನ

ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ

ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ

ಅಂದವ ಹೊಗಳಲು ಸಾಧ್ಯವೇ ನಿನ್ನ ಮುಂದೆ ಮೌನವೇ

ಅತ್ತ ಊರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೆ

ನಡುವೇ ಉಳುಕುತ್ತೆ ಅಲ್ಲವೇ ನಿನ್ನ ಬಿಟ್ಟರಿಲ್ಲವೇ

ಅಲ್ಲೊಂದು ರಾಜರ ಬೀದಿಯಿದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ

ಇಲ್ಲೊಂದು ಹೃದಯ ಕೋಟೆಯಿದೆ ಇಲ್ಲಿ ಎಂತೆಂಥ ಕನಸೋ ಕಾವಲಿದೆ

ಎಲ್ಲ ಕಾವಲು ದಾಟಿದ ಚೋರಿಯು ನೀನೇನಾ

ಹತ್ತಿರ ಇದ್ದರೂ ಬಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ

ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

ನಿನ್ನ ಚಂದ ಹೊಗಳಲು ಪದ ಪುಂಜ ಸಾಲದು

ನಿನ್ನ ಕಂಗಳ ಕಾಂತಿಗಳಿಂದಾನೆ ತಾನೇನೆ ಊರೆಲ್ಲ ಹೊಂಬೆಳಕು

ನೀನು ಹೆಜ್ಜೆಯೇ ಇಟ್ಟಲ್ಲಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು

ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

- It's already the end -