00:00
04:55
ನೀನೆಂದು ನನ್ನವನು ನಾನೆಂದೂ ನಿನ್ನವಳು
ನಿನಗಾಗೆ ಕಾಯುವೆ ನಾನು ಹಗಲು ರಾತ್ರಿ ಬಾರೋ
ಮನಸಲ್ಲಿ ನೀನಿರುವೆ ಕನಸಲೂ ಕಾದಿರುವೆ
ಪ್ರೀತಿಲಿ ತೇಲಿಸಿ ನಿನ್ನನು ಸೇರುವೆ ನಾನು ಬಾರೋ
ನೀ ಮನದ ತುಡಿತ ಕಣೋ
ಈ ಹೃದಯ ಮಿಡಿತ ಕಣೋ
ಓ ನಿನ್ನ ಮೊದಲ ಮಾತಿನಲೇ
ನಾ ಕಳೆದು ಹೋಗಿರುವೆ
ನಿನ್ನಂದ ಚೆಂದಕೆ ಸಾಟಿ ಯಾರು ಹೇಳೋ ಓ ಚೆಲುವಾ
ನಿನ್ನಂದ ಚೆಂದಕೆ ಸಾಟಿ ಯಾರು ಹೇಳೋ ಓ ಚೆಲುವಾ
ಅಂದು ಕಂಡ ಕನಸು ನೀನು
ಇಂದು ನನ್ನ ಬದುಕೇ ನೀನು
ನೀ ಬೆರೆತು ಹೋದೆ ನನ್ನೀ ಉಸಿರಲಿ
ನಗುನಗುತ ಮನಸನು ಕದ್ದು
ಅನುದಿನವು ಹೊಸತನ ತಂದು
ನೀ ಒಲಿದು ಬಾರೋ ನನ್ನೀ ಬಾಳಲಿ
ಈ ನನ್ನ ಹೃದಯದ ಗೂಡಲಿ
ನೀನೇ ರಾಜ ಓ ಚೆಲುವಾ
ನಿನ್ನ ಪ್ರೀತಿ ಮೂಡಿದೆ ತಾಗಿ
ನನ್ನ ಹೃದಯ ಹಾಡಿದೆ ಕೂಗಿ
ಏಳೇಳು ಜನ್ಮದಲೂ ನಿನ ಸೇರುವೆ
ಈ ನನ್ನ ಉಸಿರಿರೋ ತನಕ
ನಿನ್ನ ಕೂಡಿ ಬಾಳುವ ತವಕ
ಸಂಗಾತಿ ನಿನಗಾಗಿ ನಾ ಕಾಯುವೆ
ನಿನ ಪ್ರೀತಿಗಾಗಿ ನಾನು ಸೋತು ಹೋದೆ ಓ ಚೆಲುವಾ
ನೀನೆಂದು ನನ್ನವನು ನಾನೆಂದೂ ನಿನ್ನವಳು
ನಿನಗಾಗೆ ಕಾಯುವೆ ನಾನು ಹಗಲು ರಾತ್ರಿ ಬಾರೋ
ಮನಸಲ್ಲಿ ನೀನಿರುವೆ ಕನಸಲೂ ಕಾದಿರುವೆ
ಪ್ರೀತಿಲಿ ತೇಲಿಸಿ ನಿನ್ನನು ಸೇರುವೆ ನಾನು ಬಾರೋ
ನೀ ಮನದ ತುಡಿತ ಕಣೋ
ಈ ಹೃದಯ ಮಿಡಿತ ಕಣೋ
ನಿನ ಮೊದಲ ಮಾತಿನಲೇ
ನಾ ಕಳೆದು ಹೋಗಿರುವೆ
ನಿನ್ನಂದ ಚೆಂದಕೆ ಸಾಟಿ ಯಾರು ಹೇಳೋ ಓ ಚೆಲುವಾ
ನಿನ್ನಂದ ಚೆಂದಕೆ ಸಾಟಿ ಯಾರು ಹೇಳೋ ಓ ಚೆಲುವಾ