background cover of music playing
Aparanji Chinnavo - Mano

Aparanji Chinnavo

Mano

00:00

05:03

Similar recommendations

Lyric

ಅಪರಂಜಿ

ಚಿನ್ನವೋ ಚಿನ್ನವೋ

ನನ್ನಾ ಮನೆಯ ದೇವರು

ಗುಲಗಂಜೀ

ದೋಷವೋ ದೋಷವೋ

ಇರದಾ ಸುಗುಣ ಶೀಲರು

ಉರಿಯೋ ಸೂರ್ಯನು ಅವನ್ಯಾಕೇ

ಕರಗೋ ಚಂದ್ರನು ಅವನ್ಯಾಕೆ ಹೋಲಿಕೆ

ಅಪರಂಜಿ

ಚಿನ್ನವೋ, ಚಿನ್ನವೋ

ನನ್ನಾ ಮನೆಯ ದೇವತೆ

ಗುಲಗಂಜೀ

ದೋಷವೋ ದೋಷವೋ

ಇರದಾ ಬಾಳ ಸ್ನೇಹಿತೆ

ಬಾಡೋ ಮಲ್ಲಿಗೆ ಹೂವ್ಯಾಕೇ

ಶಿಲೆಯಾ ಬಾಲಿಕೆ ಅವಳ್ಯಾಕೆ ಹೋಲಿಕೆ

ಅಪರಂಜಿ

ಚಿನ್ನವೋ ಚಿನ್ನವೋ

ನನ್ನಾ ಮನೆಯ ದೇವರು

ಮನದಲ್ಲಿ ನಲಿದಾಡೋ ನಾಯಕಾ

ನೆನೆದಂತೆ ತಾ ಹಾಡೋ ಗಾಯಕಾ

ಕಣ್ಣಲ್ಲೇ ಮಾತಡೋ ನಾಯಕಿ

ನಿಜ ಹೇಳಿ ನನ್ನಾಳೋ ಪಾಲಕಿ

ನಡೆಯಲ್ಲೂ ನುಡಿಯಲ್ಲೂ

ಒಂದೇ ವಿಧವಾದ ಹೋಲಿಕೆ

ನಗುವಲ್ಲೂ ಮುನಿಸಲ್ಲೂ

ಪ್ರೀತಿ ಒಂದೇನೆ ಕಾಣಿಕೆ

ಅಪರಂಜಿ

ಚಿನ್ನವೋ ಚಿನ್ನವೋ

ನನ್ನಾ ಮನೆಯ ದೇವತೆ

ಗುಲಗಂಜೀ

ದೋಷವೋ ದೋಷವೋ

ಇರದಾ ಬಾಳ ಸ್ನೇಹಿತೆ

ಬಾಡೋ ಮಲ್ಲಿಗೆ ಹೂವ್ಯಾಕೇ

ಶಿಲೆಯಾ ಬಾಲಿಕೆ ಅವಳ್ಯಾಕೆ ಹೋಲಿಕೆ

ಅಪರಂಜಿ

ಚಿನ್ನವೋ ಚಿನ್ನವೋ

ನನ್ನಾ ಮನೆಯ ದೇವರು

ಸುಖವಾದ ಸಂಸಾರ ನಮ್ಮದು

ನಮ್ಮಲ್ಲಿ ಅನುಮಾನ ಸುಳಿಯದು

ಪ್ರತಿ ರಾತ್ರಿ ಆರಂಭ ವಿರಸವೇ

ವಿರಸಕ್ಕೆ ಕೊನೆಯಂದು ಸರಸವೇ

ಕೋಪಕ್ಕೇ ತಾಪಕ್ಕೇ

ಎಣ್ಣೆ ಎರೆಯೊಲ್ಲ ಇಬ್ಬರೂ

ಬಡತನವೇ ಸುಖವೆಂದು

ಒಬ್ಬರ ಪರವಾಗಿ ಒಬ್ಬರು

ಅಪರಂಜಿ

ಚಿನ್ನವೋ ಚಿನ್ನವೋ

ನನ್ನಾ ಮನೆಯ ದೇವರು

ಗುಲಗಂಜೀ

ದೋಷವೋ ದೋಷವೋ

ಇರದಾ ಸುಗುಣ ಶೀಲರು

ಉರಿಯೋ ಸೂರ್ಯನು ಅವನ್ಯಾಕೇ

ಕರಗೋ ಚಂದ್ರನು ಅವನ್ಯಾಕೆ ಹೋಲಿಕೆ

ಅಪರಂಜಿ

ಚಿನ್ನವೋ ಚಿನ್ನವೋ

ನನ್ನಾ ಮನೆಯ ದೇವತೆ

- It's already the end -