background cover of music playing
Aakashadaage Yaaro - Mano

Aakashadaage Yaaro

Mano

00:00

05:07

Similar recommendations

Lyric

ಆಕಾಶದಾಗೆ ಯಾರೋ ಮಾಯಗಾರನು

ಚಿತ್ತಾರ ಮಾಡಿಹೋಗೋನೇ

ಈ ಭೂಮಿ ಮ್ಯಾಗೆ ಯಾರೋ ತೋಟಗಾರನು

ಮಲೆನಾಡ ಮಾಡಿಹೋಗೋನೇ

ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು

ಸಂಚಾರ ಮಾಡುವಾ ಬಾರಾ

ಆಕಾಶದಾಗೆ ಯಾರೋ ಮಾಯಗಾರನು

ಚಿತ್ತಾರ ಮಾಡಿಹೋಗೋನೇ

ಈ ಭೂಮಿ ಮ್ಯಾಗೆ ಯಾರೋ ತೋಟಗಾರನು

ಮಲೆನಾಡ ಮಾಡಿಹೋಗೋನೇ

ಸುದ್ದಿಯಿಲ್ಲದೆ ಮೋಡ ಶುದ್ಧಿಯಾಗೋದು

ಸದ್ದೆಯಿಲ್ಲದೇ ಗಂಧ ಗಾಳಿಯಾಗೋದು

ತಂಟೇನೆ ಮಾಡದೇ ಹೊತ್ತುಟ್ಟಿ ಹೋಗೋದು

ಏನೇನು ಮಾಡದೇ ನಾವೇಕೆ ಬಾಳೋದು?

ಹಾರೋ ಹಕ್ಕಿನ ತಂದು ಕೂಡಿ ಹಾಕೋದು

ಕಟ್ಟೋ ಜೇನನ್ನ ಸುಟ್ಟು ತಿಂದು ಹಾಕೋದು

ನರಮನುಷ್ಯ ಕಲಿಯಲ್ಲ ಒಳ್ಳೆಯದು ಉಳಿಸಲ್ಲ

ಅವನಡಿಯೋ ದಾರೀಲಿ ಗರಿಕೇನೂ ಬೆಳಿಯಲ್ಲ

ಚಿಲಿಪಿಲಿಗಳ ಸರಿಗಮ ಕಿವಿಯೊಳಗೆ

ನೀರಲೆಗಳ ತಕಧಿಮಿ ಎದೆಯೊಳಗೆ

ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು

ಸಂಚಾರ ಮಾಡುವಾ ಬಾರಾ

ಆಕಾಶದಾಗೆ ಯಾರೋ ಮಾಯಗಾರನು

ಚಿತ್ತಾರ ಮಾಡಿಹೋಗೋನೇ

ಈ ಭೂಮಿ ಮ್ಯಾಗೆ ಯಾರೋ ತೋಟಗಾರನು

ಮಲೆನಾಡ ಮಾಡಿಹೋಗೋನೇ

ಕಾಡು ಸುತ್ತುವ ಆಸೆ ರಾಣಿಗೇಕಮ್ಮಾ

ಕಾಲು ಇಟ್ಟರೆ ಸುತ್ತ ಕಲ್ಲು ಮುಳ್ಳಮ್ಮ

ಏಳೋದು ಬೀಳೋದು ಬಡವರ ಪಾಡಮ್ಮ

ನೀವ್ಯಾಕೆ ಹಾಡಿರಿ ಈ ಹಳ್ಳಿ ಹಾಡಮ್ಮ

ಇಲ್ಲಿ ಬೀಸುವ ಗಾಳಿ ಉರಲ್ಯಾಕಿಲ್ಲ?

ಇಲ್ಲಿ ಸಿಕ್ಕುವ ಪಾಠ ಶಾಲೆಲ್ಯಾಕಿಲ್ಲ?

ಬಂಗಾರ ಸಿಂಗಾರ ಸಾಕಾಗಿ ಹೋಯಿತು

ಅರಮನೆ ಆನಂದ ಬೇಸತ್ತು ಹೋಯಿತು

ಕೆಳಗಿಳಿಸುವ ಮನಸಿನ ಭಾರಗಳ

ಜಿಗಿಜಿಗಿಯುವ ಚಿಂತೆಯ ಗುಡ್ಡಗಳ

ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು

ಸಂಚಾರ ಮಾಡುವಾ ಬಾರಾ

ಆಕಾಶದಾಗೆ ಯಾರೋ ಮಾಯಗಾರನು

ಚಿತ್ತಾರ ಮಾಡಿಹೋಗೋನೇ

ಈ ಭೂಮಿ ಮ್ಯಾಗೆ ಯಾರೋ ತೋಟಗಾರನು

ಮಲೆನಾಡ ಮಾಡಿಹೋಗೋನೇ

ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು

ಸಂಚಾರ ಮಾಡುವಾ ಬಾರಾ

- It's already the end -