00:00
04:12
ಈ ಹಾಡಿನ ಕುರಿತು ಪ್ರಸ್ತುತ ಯಾವುದೇ ಮಾಹಿತಿ ಲಭ್ಯವಿಲ್ಲ.
ಹೃದಯವ ಕಳೆಯುವ ಹಸಿಬಿಸಿ ಅನುಭವ
ಒಂಚೂರು ಸ್ಪರ್ಶ
ಒಂಚೂರು ಊಹೆ
ಒಂಚೂರು ಗಂಧ
ಒಂಚೂರೆ ಮಾಯೆ
ಮುದ್ದಾಗಿ ಸೇರಿ
ನನ್ನಲ್ಲಿ ಹೀಗೊಂದು ಜಾದು ತುಂಬಾ ಜೋರು
ಪ್ರೇಮಕ್ಕೆ ಕಣ್ಣಿಲ್ಲ ಅಂತ ಅಂದೋರ್ಯಾರು
ಹೃದಯವ ಕಳೆಯುವ ಹಸಿಬಿಸಿ ಅನುಭವ
♪
ಅಡಗಲೆಂದೇ ಎದೆಗೂಡಲ್ಲಿ ಇದೆ ಜಾಗ ಖಾಸ
ಅಳಿಸದಂತ ಸ್ವರಗಳಿಂದ ಬರೆದ ರೂಪ ವಿನ್ಯಾಸ
ನನಗಂತೂ ನೀನು
ಎಂದುಕೂಡ ಎಂದಿಗಿಂತ ಚಂದ
ಎಲ್ಲೆಲ್ಲೂ ಬಣ್ಣದ ಜಾತ್ರೆ, ನಿಂದೇ ತೇರು
ಪ್ರೇಮಕ್ಕೆ ಕಣ್ಣಿಲ್ಲ ಅಂತ ಅಂದೋರ್ಯಾರು
♪
ಹಿತವೇ ಬೇರೆ ಸನಿಹ ನೀನು ಇರುವಷ್ಟು ಹೊತ್ತು
ಬೆಳಕೇ ಹೋದ ಊರಿಗೀಗ ಮರಳಿದಂತೆ ವಿದ್ಯುತ್ತು
ಕಿವಿಗೊಟ್ಟು ನೀ ಕೇಳು
ಪ್ರೀತಿಯಲಿ ಬೀಳುವಂಥ ಸದ್ದು
ಹೃದಯವ ಕದಿಯುವ, ಕಲೆಯನು ಕಲಿಯುವ
ಒಂಚೂರು ಸ್ಪರ್ಶ
ಒಂಚೂರೇ ಊಹೆ
ಒಂಚೂರು ಗಂಧ
ಒಂಚೂರೇ ಮಾಯೆ
ತಂತಾನೇ ಸೇರಿ
ಅಂಗೈಯ ಮೇಲೀಗ ನೀನು ಮೆಲ್ಲ ಕೇಳು
ಪ್ರೇಮಕ್ಕೆ ಕಣ್ಣಿಲ್ಲ ಅಂತ ಅಂದೋರ್ಯಾರು