00:00
04:33
ಆಗಾಗ ನೆನಪಾಗುತಾಳೆ
ಕಣ್ಣೀರಿಗೆ ನೆಪವಾಗುತಾಳೆ
ಆಗಾಗ ನೆನಪಾಗುತಾಳೆ
ಕಣ್ಣೀರಿಗೆ ನೆಪವಾಗುತಾಳೆ
ಹೆಜ್ಜೆ ಹೆಜ್ಜೆಗೂ ಬಿಕ್ಕಳಿಕೆ
ಹೇಳದೆ ಹೋಗಿರೋ ಕಾರಣಕೆ
ಅವಲೆಂಬ ಮೋಹ ವಿಷವಾಗಿ
ಮೌನವನೇ ಹೊತ್ತು ಶವವಾಗಿ
ಹೆಗಲ ಬಯಸಿರುವೆ
ನೆನಪ ಸುಡುತಿರುವೆ
ಮರೆಯೋಕೆ ಆಗ್ತಿಲ್ಲ
ಆಗಾಗ ನೆನಪಾಗುತಾಳೆ
ಕಣ್ಣೀರಿಗೆ ನೆಪವಾಗುತಾಳೆ
ಆಗಾಗ ನೆನಪಾಗುತಾಳೆ
ಕಣ್ಣೀರಿಗೆ ನೆಪವಾಗುತಾಳೆ
♪
ಚಿನ್ನದ ರೆಕ್ಕೆ ಹೊತ್ತಂತ ಚಿಟ್ಟೆ
ಹೃದಯ ಉಕ್ಕಿತು ಬಂದು
ಬಣ್ಣವ ತೋರಿ ಎದ್ಹೋಯ್ತು ಹಾರಿ
ಹೃದಯ ಚೂರಾಯಿತು ನಂದು
ಪ್ರೀತಿ ಸುಳ್ಳಾಯಿತೇನು?
ನೆನಪ ಹಂಗಿಲ್ಲವೇನು?
ಭೂಮಿ ದುಂದಲ್ಲವೇನು?
ಮತ್ತೆ ಸಿಗಲಾರಳೇನು?
♪
ಓ ಬದುಕೇ ನೀನು ಮಾಯಾವಿ
ಕೊಟ್ಟು ಕಳೆಯೋ ನೀ ಮೇಧಾವಿ
ಪ್ರಶ್ನೆಯೇ ಎಲ್ಲಾ
ಉತ್ತರ ಇಲ್ಲ
ಸಂತೈಸೋರಿಲ್ಲ
ಆಗಾಗ ನೆನಪಾಗುತಾಳೆ
ಕಣ್ಣೀರಿಗೆ ನೆಪವಾಗುತಾಳೆ
ಆಗಾಗ ನೆನಪಾಗುತಾಳೆ
ಕಣ್ಣೀರಿಗೆ ನೆಪವಾಗುತಾಳೆ