00:00
04:08
ನೀನು ಬಗೆಹರಿಯದ ಹಾಡು
ನೋಡು ಹದಿಹರೆಯದ ಪಾಡು
ಈ ವಿಷಯದಿ ನನಗೆ
ಅನುಭವವು ಕಮ್ಮಿ
ಎಷ್ಟೆಂದರೂ ನಾನು
ಉದಯೋನ್ಮುಖ ಪ್ರೇಮಿ
ಇದು ಖಾಸಗಿ ಕಾರ್ಯಕ್ರಮ ಇನ್ನೇನಿಲ್ಲ
♪
ನೀನು ಬಗೆಹರಿಯದ ಹಾಡು
ನೋಡು ಹದಿಹರೆಯದ ಪಾಡು
♪
ನನಗಷ್ಟೇ ನೀನು ಕೊಡುವಾಗ ಪಾಠ
ಹೃದಯಾನೇ ನನ್ನ ಗುರುದಕ್ಷಿಣೆ
ತುಟಿ ಕಚ್ಚಿ ಆಹಾ! ಬರೆವಾಗ ನೀನು
ನನಗಂತೂ ಬೇಕು ಹಿತರಕ್ಷಣೆ
ಕನಸಂತೂ ಈಗ ಚಿರಪರಿಚಿತ ಊರು
ಹುಚ್ಚಾದರೆ ಪೂರ್ತಿ
ಹೊಣೆಗಾರರು ಯಾರು
ದಯಪಾಲಿಸು ಕಿರು ಕಾಳಜಿ ಇನ್ನೇನಿಲ್ಲ
♪
ನೀನು ಬಗೆಹರಿಯದ ಹಾಡು
♪
ಏಕಾಂಗಿಯಾದ ನಿನ ಕೋಣೆಯಲ್ಲಿ
ನಾನಾಗಬೇಕು ನಿಲುಗನ್ನಡಿ
ಅಥವಾ ನೀ ಬಂದು ರುಚಿ ನೋಡಿ ನೋಡಿ
ಚೌಕಾಶಿ ಮಾಡೋ ಸಿಹಿ ಅಂಗಡಿ
ಜೊತೆ ಸೇರಿಸಿ ಹೆಸರಾ
ಬರೆದಳಿಸುವ ಗೀಳು
ಮುಖ ಮರೆಸುವ ಹೆರಳ
ಬದಿ ಸರಿಸಲೇ ಹೇಳು?
ಪಠ್ಯೇತರ ಚಟುವಟಿಕೆಯು ಇನ್ನೇನಿಲ್ಲ
♪
ನೀನು ಬಗೆಹರಿಯದ ಹಾಡು
ನೋಡು ಹದಿಹರೆಯದ ಪಾಡು