00:00
04:25
ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ
ಹೇಗೆ ಹೇಳಲಿ ನನ್ನ ಮನದ ಹಂಬಲ
ಮಾತನಾಡಲಾ ಇಲ್ಲ ಹಾಡು ಹಾಡಲಾ
ಹೇಗೆ ತಿಳಿಸಲಿ ನನ್ನ ಎದೆಯ ತಳಮಳ
ಪತ್ರ ಬರೆಯಲಾ
♪
ಬೊಗಸೇಲಿ ಹಿಡಿದು ನಿನ್ನ ಮುದ್ದಾದ ಈ ಮೊಗವನ್ನ
ನೋಡುತ್ತ ಹಾಗೆ ನಿನ್ನ ಕಣ್ಣಲ್ಲೇ ಕರಗೋ ಅಸೆ
ಮಗುವಾದೆ ಸುಮ್ಮನೆ ನಿನ್ನ ಮಡಿಲಲ್ಲಿ ಮಲಗಿಸು ಮುನ್ನ
ಈ ಬೆಚ್ಚಗೆ ಎದೆಯಲ್ಲಿ ನಾ ಬಚ್ಚಿ ಕೂರುವಾಸೆ
ನಗುವಾಗಲಾ, ನೆರಳಾಗಲಾ, ಉಸಿರಾಗಲಾ
I love you love you love you ಗೆಳೆಯ
ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ
ಹೇಗೆ ಹೇಳಲಿ ನನ್ನ ಮನದ ಹಂಬಲ
ಪತ್ರ ಬರೆಯಲಾ
♪
ನುಣುಪಾದ ಪಾದಗಳನ್ನ ನೆಲವನ್ನು ಸೋಕುವ ಮುನ್ನ
ಅಂಗೈಯ ಚಾಚಿ ನಿನ್ನ ನಾ ನಡೆಸುವಾಸೆ
ಜೊತೆಯಾಗಿ ಇದ್ದರೆ ನಾವು ಒಂದೊಮ್ಮೆ ಬಂದರೂ ಸಾವು
ನಗುನಗುತ ಅಲ್ಲೇ ಅದನು ಸ್ವೀಕರಿಸುವಾಸೆ
ಯುಗದಾಚೆಗೂ ಜಗದಾಚೆಗೂ ಜೊತೆಯಾಗಿರು
I love you love you love you ಗೆಳೆಯ
ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ
ಹೇಗೆ ಹೇಳಲಿ ನನ್ನ ಮನದ ಹಂಬಲ
ಮಾತನಾಡಲಾ ಇಲ್ಲ ಹಾಡು ಹಾಡಲಾ
ಹೇಗೆ ತಿಳಿಸಲಿ ನನ್ನ ಎದೆಯ ತಳಮಳ
ಪತ್ರ ಬರೆಯಲಾ