00:00
03:01
ನೆನಪಿನ ಹುಡುಗಿಯೇ ಕೊನೆಯಲಿ ನುಡಿಯುವೆ
ಕೇಳಿಬಿಡು ಸರಿಯಾಗಿ
ಕನಸಿನ ಕೆಲಸವು ಮುಗಿದರೂ ಅನುವೆನು
ನಾ ನಿನ್ನ ಅನುರಾಗಿ
ಈ ಮುಗಿಯದ ಕಥೆಯಲ್ಲಿ (ಈ ಮುಗಿಯದ ಕಥೆಯಲ್ಲಿ)
ಮೊದಲ ಸಾಲು ನನದೆ (ಮೊದಲ ಸಾಲು ನನದೆ)
ಕೊನೆ ಸಾಲು ಕೂಡ ನನದೆ, ನಿಂದೇನಿದೆ (ಕೊನೆ ಸಾಲು ಕೂಡ ನನದೆ, ನಿಂದೇನಿದೆ)
♪
ವಿದಾಯವೇ ಉಲ್ಲಾಸವು
ವಿಷಾದವೆಂಬುದೀಗ ಸಂತೋಷವು
ಎಷ್ಟಂದರೂನು ನಿನ್ನ ನಲ್ಲ ನಾನು
ಏಕಾಂತ ಗೀತೆಯ ಸಾಥಿ ನೀನು
ಹಳೆ ಬಯಕೆಯ ಬಳ್ಳಿಯಲಿ ಹೂವೆಲ್ಲವು ನಿನದೆ (ಹಳೆ ಬಯಕೆಯ ಬಳ್ಳಿಯಲಿ ಹೂವೆಲ್ಲವು ನಿನದೆ)
ಮುಳ್ಳು ಕೂಡ ನಿನದೆ ನಂದೇನಿದೆ (ಮುಳ್ಳು ಕೂಡ ನಿನದೆ ನಂದೇನಿದೆ)
♪
ನೆನಪಿನ ಹುಡುಗಿಯೇ ಕೊನೆಯಲಿ ನುಡಿಯುವೆ
ಕೇಳಿಬಿಡು ಸರಿಯಾಗಿ
ಕನಸಿನ ಕೆಲಸವು ಮುಗಿದರೂ ಅನುವೆನು
ನಾ ನಿನ್ನ ಅನುರಾಗಿ
ನಿನ್ನುಸಿರಿನ ಬಿಸಿಯನ್ನು ದಯಪಾಲಿಸು ನೀನು (ನಿನ್ನುಸಿರಿನ ಬಿಸಿಯನ್ನು ದಯಪಾಲಿಸು ನೀನು)
ಸರಿ ಹೋಗುವೆ ನಾನು ಇನ್ನೇನಿದೆ (ಸರಿ ಹೋಗುವೆ ನಾನು ಇನ್ನೇನಿದೆ)