00:00
05:00
ಮೊದಲ ಮಳಯಂತೆ ಎದೆಗೆ ಇಳಿದೆ ಮೆಲ್ಲಗೆ
ಮೊದಲ ಕನಸಂತೆ ಒಲವೇ ಒಲಿದೆ ಒಮ್ಮೆಗೆ
ಚಾಚಿದ ಕೈಗೆ ಆಕಾಶವೇ ತಾಗಿದೆ
ಗೀಚಿದ ಹಾಗೆ ಮಳೆಬಿಲ್ಲೆ ಮೈಗಂಟಿದೆ
ಹೊಸ ಸಂವತ್ಸರ ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ
ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ
♪
ನೀ ನನಗೆ ಸಿಗುವ ಮುನ್ನ
ಎಲ್ಲೆಲ್ಲೂ ಬರಿದೆ ಮೌನ
ಕೋಟಿ ಕೋಟಿ ಸ್ವರ ಒಮ್ಮೆ ಚಿಮ್ಮೋತರ
ಬಂದೆ ಹತ್ತಿರ ನಿಂತೆ ಬಾನೆತ್ತರ
ಕಣ್ಮುಚ್ಚಿ ಕಣ್ಬಿಟ್ಟರೆ
ಓ, ಬದಲಾಗಿದೆ ಈ ಧರೆ
ಹೊಸ ಸಂವತ್ಸರ ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ
♪
ಒಂದೊಂದು ಖುಷಿಗೂ ಇಂದು
ನಾನಿಡುವ ಹೆಸರೇ ನಿಂದು
ನನ್ನ ಏಕಾಂತಕೆ ಅಂತ್ಯ ನೀ ಹಾಡಿದೆ
ಸುಂದರ ಸ್ವರ್ಗಕೆ ನನ್ನ ನೀ ದೂಡಿದೆ
ಕಣ್ಮುಂದೆ ನೀನಿದ್ದರೆ
ಈ ಲೋಕಕೆ ನಾ ದೊರೆ
ಹೊಸ ಸಂವತ್ಸರ ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ
ಮೊದಲ ಮಳಯಂತೆ ಎದೆಗೆ ಇಳಿದೆ ಮೆಲ್ಲಗೆ
ಮೊದಲ ಕನಸಂತೆ ಒಲವೇ ಒಲಿದೆ ಒಮ್ಮೆಗೆ
ಚಾಚಿದ ಕೈಗೆ ಆಕಾಶವೇ ತಾಗಿದೆ
ಗೀಚಿದ ಹಾಗೆ ಮಳೆಬಿಲ್ಲೆ ಮೈಗಂಟಿದೆ
ಹೊಸ ಸಂವತ್ಸರ ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ