00:00
04:51
ಇವನ್ಯಾರ ಮಗನೋ ಹಿಂಗೌನಲ್ಲ
ಇವಳ್ಯಾರ ಮಗಳೋ ಹಿಂಗೌಳಲ್ಲ
ಮಾಲಕ್ಷ್ಮೀ ರೂಪ
ಶೂರ ಈ ಭೂಪ
ಮಾಲಕ್ಷ್ಮೀ ರೂಪ
ಶೂರ ಈ ಭೂಪ
ಕಣ್ಣಿಂದ್ಲೆ ಸೆಳೆಕೊಂಡ್ಲೆ
ಇವನ್ಯಾರ ಮಗನೋ ಹಿಂಗೌನಲ್ಲ
ಇವಳ್ಯಾರ ಮಗಳೋ ಹಿಂಗೌಳಲ್ಲ
♪
ಮನಸೆಲ್ಲ ಇವನಿಂದ ರಾಟೆ ತೊಟ್ಲಾಯ್ತು
ಈ ತೊಟ್ಲ ತುಂಬೆಲ್ಲ ಇವನೇ ಕುಂತಾಯ್ತು
ಎದೆಯೀಗ ಇವಳಿಂದ ಗಿರಿಗಿಟ್ಲೆ ಆಯ್ತು
ಇವಳ್ ಹಿಂದೆ ಹಿಂದೇನೆ ಅಲೆಯೋಕ್ ಸುರುವಾಯ್ತು
ಏನು ನವಿರು ಕೂಗೋ ಹೆಸರು ಹೇಗೆ ಇರಬಹುದಪ್ಪ
ನಾಳೆ ಇವನು ಆದ್ರೆ ಗೆಳೆಯ ಹ್ಯಾಗೆ ಕರಿಬಹುದಪ್ಪ
ಇವಳೇನ ಸಿರಿದೇವಿ
ಇವನ್ಯಾರ ಮಗನೋ ಹಿಂಗೌನಲ್ಲ
ಇವಳ್ಯಾರ ಮಗಳೋ ಹಿಂಗೌಳಲ್ಲ
♪
ಜಾತ್ರೆಯ ನೋಡೋಕೆ ನೋಡಿ ಕೊಂಡಾಡೋಕೆ
ಶಿವನೇ ಅವತಾರನ ಎತ್ತಿ ಬಂದಾನೊ
ಕೈಲಾಸ ಗಿರಿಯಿಂದ ಭೂಲೋಕ ಸುತ್ತೋಕೆ
ಪಾರೋತಿ ಈ ವೇಷ ತಾಳಿ ಬಂದಾಳೋ
ಏನು ಇವನ ಆಸೆ ಒಳಗೆ ಯಾರ ಪಟವೋ ಕಾಣೆ
ಯಾವ ಪದವು ಹೇಳದೇನೆ ನನ್ನ ಸೆಳೆದ ಜಾಣೆ
ಒಲಿದಾರೆ ಇವದೇನೆ
ಇವನ್ಯಾರ ಮಗನೋ ಹಿಂಗೌನಲ್ಲ
ಇವಳ್ಯಾರ ಮಗಳೋ ಹಿಂಗೌಳಲ್ಲ
ಮಾಲಕ್ಷ್ಮೀ ರೂಪ
ಶೂರ ಈ ಭೂಪ
ಮಾಲಕ್ಷ್ಮೀ ರೂಪ
ಶೂರ ಈ ಭೂಪ
ಕಣ್ಣಿಂದ್ಲೆ ಸೆಳೆಕೊಂಡ್ಲೆ
ಇವನ್ಯಾರ ಮಗನೋ ಹಿಂಗೌನಲ್ಲ
ಇವಳ್ಯಾರ ಮಗಳೋ ಹಿಂಗೌಳಲ್ಲ