00:00
05:16
"ಬಾಳುವಂತ ಹೊವೆ" ಎಂಬ ಹಾಡು 1983 ರ ಕನ್ನಡ ಚಿತ್ರ "ಆಕಾಶ್ಮಿಕ" ನ ಪ್ರಮುಖ ಹಾಡಾಗಿದೆ. ಈ ಹಾಡನ್ನು ಪ್ರಸಿದ್ಧ ಗಾಯಕರಾದ ರಾಜ್ ಕುಮಾರ್ ಅವರು ಪ್ರದರ್ಶಿಸಿದ್ದಾರೆ. ಸಂಗೀತ ನಿರ್ದೇಶಕರಾದ ಪದ್ಮಶ್ರೀ ರವರು ಈ ಹಾಡಿನ ಸಂಗೀತವನ್ನು ರಚಿಸಿದ್ದಾರೆ ಮತ್ತು ಸಾಹಿತ್ಯವನ್ನು ಗಣೇಶವಂಶಿ ಅವರು ನೀಡಿದ್ದಾರೆ. melodious ಸೌಂದರ್ಯ ಮತ್ತು ತೀವ್ರ ಭಾವನೆಗಳಿಂದ ಕೂಡಿರುವ ಈ ಹಾಡು, ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ಕೃತಿಯಾಗಿದ್ದು, ಚಿತ್ರಕ್ಕೆ ಅದ್ಭುತ ಮೇಳವನ್ನು ನೀಡಿದೆ.
ಬಾಳುವಂತ ಹೂವೆ ಬಾಡುವಾಸೆ ಏಕೆ
ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ ದೊಣಿ ಮೇಲೆ ಯಾನ ಯೋಗ್ಯವೇ
ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
♪
ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು
ಬಾಳು ಒಂದು ಸಂತೆ, ಸಂತೆ ತುಂಬ ಚಿಂತೆ
ಮಧ್ಯ ಮನಗಳಿಂದ ಚಿಂತೆ ಬೆಳೆವುದಂತೆ
ಅಂಕೆ ಇರದ ಮನಸನು ಡಂಡಿಸುವುದು ನ್ಯಾಯ
ಮೂಕ ಮುಗ್ದ ದೇಹವ ಹಿಂಸಿಸುವುದು ಹೇಯಾ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೆರಲು
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಳು
ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
♪
ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ
ನಾವೇ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ
ಇಲ್ಲಿ ಈಸಬೇಕು ಇದ್ದು ಜಯಿಸಬೇಕು
ನಾಗರಿಕರಾದಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ
ಮನದ ಡೊಂಕು ಕಾಣದೆ ಜಗವನೇಕೆ ನೀ ದೂರುವೆ
♪
ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ ದೊಣಿ ಮೇಲೆ ಯಾನ ಯೋಗ್ಯವೇ
ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ