background cover of music playing
Manase Baduku (From "Amruthavarshini") - S. P. Balasubrahmanyam

Manase Baduku (From "Amruthavarshini")

S. P. Balasubrahmanyam

00:00

05:04

Similar recommendations

Lyric

ಮನಸೇ

ಬದುಕು ನಿನಗಾಗಿ, ಬವಣೆ ನಿನಗಾಗಿ

ನನ್ನ ಪ್ರೀತಿಯೇ ಸುಳ್ಳಾದರೆ, ಜಗವೆಲ್ಲ ಸುಳ್ಳು ಅಲ್ಲವೇ

ಮನಸೇ... ಮನಸೇ

ನಿನ್ನ ಒಂದು ಮಾತು ಸಾಕು, ಮರುಮಾತು ಎಲ್ಲಿ

ನಿನ್ನ ಒಂದು ಆಣತಿ ಸಾಕು, ನಾ ಅಡಿಗಳಲ್ಲಿ

ನಿನ್ನ ಒಂದು ಹೆಸರೇ ಸಾಕು, ಉಸಿರಾಟಕಿಲ್ಲಿ

ನಿನ್ನ ಒಂದು ಸ್ಪರ್ಶ ಸಾಕು, ಈ ಜನುಮದಲ್ಲಿ

ಮನಸೇ, ನಾ ಏನೇ ಮಾಡಿದರೂ

ನಿನ್ನ ಪ್ರೀತಿಗಲ್ಲವೇ

ಮನಸೇ ಮನಸಾ ಕ್ಷಮಿಸೆ

ಮನಸೇ... ಮನಸೇ

ನನ್ನ ಪ್ರೀತಿ ಗಂಗೆ ನೀನು, ಮುಡಿ ಸೇರಲೆಂದೇ

ಸಮಯಗಳ ಸರಪಳಿಯಲ್ಲಿ, ಕೈ ಗೊಂಬೆಯಾದೆ

ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ

ನಿನ್ನ ಮರೆತು ಹೋದರೆ ಈಗ ಬದುಕೇಕೆ ಮುಂದೆ

ಮನಸೇ, ನಾ ಏನೇ ಮಾಡಿದರೂ

ನಿನ್ನ ಪ್ರೀತಿಗಲ್ಲವೇ

ಮನಸೇ ಮನಸಾ ಹರಿಸೇ

ಮನಸೇ ಈ

ಬದುಕು ನಿನಗಾಗಿ, ಬವಣೆ ನಿನಗಾಗಿ

ನನ್ನ ಪ್ರೀತಿಯೇ ಸುಳ್ಳಾದರೆ, ಜಗವೆಲ್ಲ ಸುಳ್ಳು ಅಲ್ಲವೇ

- It's already the end -