00:00
03:59
ಏತಕೆ, ಬೊಗಸೆ ತುಂಬ ಆಸೆ ನೀಡುವೆ?
ಏತಕೆ, ಕನಸಿನಲ್ಲಿ ಮೀಸೆ ತೀಡುವೆ?
ಕೇಳು ನನದು ತುಸು ನೊಂದು ಬೆಂದ ಹರೆಯ
ಅದಕೆ ಇಷ್ಟೆಲ್ಲಾ ಹಾರಡುವೆ
ತುಸುವೇ ಕೈ ಚಾಚು ಸರಿ ಹೋಗುವೆ
ಏತಕೆ, ಬೊಗಸೆ ತುಂಬ ಆಸೆ ನೀಡುವೆ?
ಈ ನಲ್ಮೆಯ ಬಾಯಿ ಬಿಡಲು ನನಗೊಂದು ಪದ ಬೇಕಿದೆ
ಎನ್ನೆನ್ನಲೀ ಒಳಗಿಂದೊಳಗೆ ಅನುರಾಗ ಮಿತಿ ಮೀರಿದೆ
ಕಣ್ಣು ಕಣ್ಣು ಕಳೆತಾಗ ಯಾಮಾರಿಸಿ
ಕಳ್ಳ ಕನಸು ಬಚ್ಚಿಡುವೆ
ನಿನ್ನ ಸೆರಗ ತುದಿಯನ್ನು ಮಾತಾಡಿಸಿ
ನನ್ನ ಮನಸು ಬಿಚ್ಚಿಡುವೆ
ಏತಕೆ, ಬೊಗಸೆ ತುಂಬ ಆಸೆ ನೀಡುವೆ?
ಏತಕೆ, ಕನಸಿನಲ್ಲಿ ಮೀಸೆ ತೀಡುವೆ?
ನಿನ್ನೋಪ್ಪಿಗೆ ಇದೆಯಾ ಹೇಳು ಕಡುಪೋಲಿ ನಾನಾಗಲು?
ನಿನ್ನಾಣೆಗೂ ಕಾಯುತ್ತಿರುವೆ ಣಾ ಬೇಗ ಹಾಳಾಗಲೂ
ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ
ನೀಡು ನಿನ್ನ ಸಹಕಾರ
ಖಾಲಿ ತೋಳು ನನಗಂತು ಸಾಕಾಗಿದೆ
ಏನು ಹೇಳು ಪರಿಹಾರ?
ಏತಕೆ, ಬೊಗಸೆ ತುಂಬ ಆಸೆ ನೀಡುವೆ?
ಏತಕೆ, ಕನಸಿನಲ್ಲಿ ಮೀಸೆ ತೀಡುವೆ?
ಕೇಳು ನನದು ತುಸು ನೊಂದು ಬೆಂದ ಹರೆಯ
ಅದಕೆ ಇಷ್ಟೆಲ್ಲಾ ಹಾರಡುವೆ
ತುಸುವೇ ಕೈ ಚಾಚು ಸರಿ ಹೋಗುವೆ
ಏತಕೆ, ಬೊಗಸೆ ತುಂಬ ಆಸೆ ನೀಡುವೆ?