00:00
05:01
ಸವಿ ಸವಿ ನೆನಪು ಸಾವಿರ ನೆನಪು
ಸಾವಿರ ಕಾಲಕೂ ಸವೆಯದ ನೆನಪು
ಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೊಂದು ನೆನಪು
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೊಂದು ನೆನಪು
ಏನೋ ಒಂದು ತೊರೆದ ಹಾಗೆ
ಯಾವುದೋ ಒಂದು ಪಡೆದ ಹಾಗೆ
ಅಮ್ಮನ ಮಡಿಲ ಅಪ್ಪಿದ ಹಾಗೆ
ಕಣ್ಣಂಚಲ್ಲಿ, ಕಣ್ಣೀರ ನೆನಪು
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಮೊದಮೊದಲ್ ಹಿಡಿದ ಬಣ್ಣದ ಚಿಟ್ಟೆ
ಮೊದಮೊದಲ್ ಕದ್ದ ಜಾತ್ರೆಯ watch-u
ಮೊದಮೊದಲ್ ಸೇದಿದ ಗಣೇಶ ಬೀಡಿ
ಮೊದಮೊದಲ್ ಕೂಡಿಟ್ಟ ಹುಂಡಿಯ ಕಾಸು
ಮೊದಮೊದಲ್ ಕಂಡ touring cinema
ಮೊದಮೊದಲ್ ಗೆದ್ದ ಕಬಡ್ಡಿ ಆಟ
ಮೊದಮೊದಲ್ ಇದ್ದ ಹಳ್ಳಿಯ ಗರಿಮನೆ
ಮೊದಮೊದಲ್ ತಿಂದ ಕೈ ತುತ್ತೂಟ
ಮೊದಮೊದಲ್ ಆಡಿದ ಚುಕುಬುಕು ಪಯಣ
ಮೊದಮೊದಲ್ ಅಳಿಸಿದ ಗೆಳೆಯನ ಮರಣ
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಮೊದಮೊದಲ್ ಕಲಿತ ಅರೆ ಬರೆ ಈಜು
ಮೊದಮೊದಲ್ ಕೊಂಡ 'Hero' cycle
ಮೊದಮೊದಲ್ ಕಲಿಸಿದ ಕಮಲಾ teacher
ಮೊದಮೊದಲ್ ತಿಂದ ಅಪ್ಪನ ಏಟು
ಮೊದಮೊದಲ್ ಆದ ಮೊಣಕೈ ಗಾಯ
ಮೊದಮೊದಲ್ ತೆಗೆಸಿದ color color photo
ಮೊದಮೊದಲಾಗಿ ಚಿಗುರಿದ ಮೀಸೆ
ಮೊದಮೊದಲಾಗಿ ಮೆಚ್ಚಿದ ಹೃದಯ
ಮೊದಮೊದಲ್ ಬರೆದ ಪ್ರೇಮದ ಪತ್ರ
ಮೊದಮೊದಲಾಗಿ ಪಡೆದ ಮುತ್ತು (ಮುತ್ತು, ಮುತ್ತು, ಮುತ್ತು, ಮುತ್ತು)
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು