00:00
04:55
ಜೀವ ಜೀವ ನಮ್ಜೀವ, ನಮ್ದೈವ ಕಣೋ ಇವನು
ನಮ್ಮ ಊರ ಕಣ್ಣಾಗೋ ಸರದಾರ ಕಣೋ ಇವನು
ನಿನ್ನ ನುಡಿಯ ಜಗ ಮೆಚ್ಚಿಕೊಳ್ಳಬೇಕು
ನಡಿಗೆ ನೋಡಿ ಕೈ ಎತ್ತಿ ಮುಗಿಯಬೇಕು
ಅಪರೂಪದ ಮಾಣಿಕ್ಯವೇ ನಮ್ಮೂರಿನ ದೊರೆ
ಜೀವ ಜೀವ ನಮ್ಜೀವ ನಮ್ದೈವ ಕಣೋ ಇವನು
ನಮ್ಮ ಊರ ಕಣ್ಣಾಗೋ ಸರದಾರ ಕಣೋ ಇವನು
♪
ಬಾಲ್ಯದಿಂದ ಇಲ್ಲಿಯವರೆಗೂ
ಎಲ್ಲ ನೋವು ನಲಿವಿನ ಒಳಗೂ
ನಾನು ಕಂಡ ಲೋಕವೆಲ್ಲ ತಾಯಿ ಒಬ್ಬಳೇ
ನನಗೂ ಒಬ್ಬ ತಂದೆ ಇರುವ
ಕಾಣಲಿಕ್ಕೆ ಬಂದೆ ಬರುವ
ಎಂಬ ಕಥೆಯ ಒಪ್ಪಲಿ ಹೇಗೆ ಬಂದ ಕೂಡಲೇ
ಜೊತೆ ಬಾಳದ ಅಪ್ಪನ ದ್ವೇಷಿಸಲೇ
ಜಗ ಮೆಚ್ಚಿದ ಅವನನು ಪ್ರೀತಿಸಲೇ
ಕಣ್ಣಲಿ ಕಣ್ಣಿಟ್ಟಾ ಕ್ಷಣವೇ
ಕಣ್ಣೀರ ಹನಿಗಳೆ ಹೇಳುತಿವೆ
ನನ್ನ ಹೆತ್ತವ ಒಬ್ಬ ದೇವರು
ನಾ ದೇವರ ಮಗ
ದೇವರಾ ಮಗ
♪
ನೀತಿ ಒಂದೇ ನಿನ್ನ ವಸ್ತ್ರ
ಪ್ರೀತಿ ಒಂದೇ ನಿನ್ನ ಮಂತ್ರ
ನಿನ್ನ ಸಹನೆ ಸ್ವಾಭಿಮಾನ ಅಪರೂಪವೇ
ದೂರವಿರಲಿ ಹತ್ತಿರವಿರಲಿ
ದೂರು ಅವರು ದೂರುತಲಿರಲಿ
ನಿನ್ನ ಹಾಗೆ ನೀ ನಡೆಯೋದೆ ನಿಜ ರೂಪವು
ಕಣ್ಣೀರಿಗೆ ಕಣ್ಣಲಿ ಸ್ಥಳವಿಲ್ಲ
ನಿನ್ನ ರೆಪ್ಪೆಯ ಕಾವಲು ಇರುವಾಗ
ನೆತ್ತರಿಗೆ ಮಣ್ಣಲಿ ನೆಲೆ ಇಲ್ಲ
ನೀ ಮಣ್ಣಿನ ಮಗನಾಗಿರುವಾಗ
ಮಹಾರಾಜನು ಎಲ್ಲಿದ್ದರೂ ಮಹಾರಾಜನೇ ತಾನೆ
ಮಹಾರಾಜನೇ ತಾನೆ
ಜೀವ ಜೀವ ನಮ್ಜೀವ, ನಮ್ದೈವ ಕಣೋ ಇವನು
ನಮ್ಮ ಊರ ಕಣ್ಣಾಗೋ ಸರದಾರ ಕಣೋ ಇವನು
ನನ್ನ ಹೆತ್ತವ ಒಬ್ಬ ದೇವರು
ನಾ ದೇವರ ಮಗ
ದೇವರಾ ಮಗ
ಜೀವ ಜೀವ ನಮ್ಜೀವ ನಮ್ದೈವ ಕಣೋ ಇವನು