00:00
05:11
ಮಾತಿನಲ್ಲೇ ಹೇಳಬಲ್ಲೆನು
ರೇಖೆಯಲ್ಲೂ ಗೀಚಬಲ್ಲೆನು
ನಿನ್ನ ಹಿಂದೆ, ಮುಂದೆ ಹೀಗೆ ಕುಣಿಯಬಲ್ಲೆನು
ನೀನೇ ನನ್ನಯ ಅಂದಗಾರನು
ನನ್ನ ಕಾಡುವ ಚಂದ ಪೋರನು
ನಿನ್ನ ಪ್ರೇಮರೋಗ ನಾನೀಗ ವಾಸಿ ಮಾಡಲೇನು?
ನೀನೇ ನನ್ನಯ ಅಂದಗಾರನು
ನೋಡಬೇಡವೋ ಇನ್ನು ಯಾರನೂ
♪
ನಮ್ಮಿಬರ ಈ ಕುರಿತಾಗಿಯೇ, ಊರೆಲ್ಲವೂ, ತಾ ಮಾತಾಡಲಿ
ನಿನ್ನೊಂದಿಗೆ ನಾ ಓಡಾಡಲು, ಬಾಲಿಕೆಯರು, ಹಾಂ, ಗೋಳಾಡಲಿ
ಸುತ್ತ ಯಾರೂ ಇಲ್ಲದಾಗ ಮುತ್ತನೊಂದು ನೀಡು ಬೇಗ
ಮತ್ತೆ, ಏನೂ ಆಗದಂತೆ ಮುಂದೆ ಸಾಗುವ
ನಿನ್ನ ಪ್ರೀತಿಯನ್ನು ಸರಿಯಾಗಿ ಹೇಳಬೇಕು ನೀನು
ನೀನೇ ನನ್ನಯ ಅಂದಗಾರನು
ನೋಡಬೇಡವೋ ಇನ್ನು ಯಾರನೂ
ಮಾತಿನಲ್ಲೇ ಹೇಳಬಲ್ಲೆನು
ರೇಖೆಯಲ್ಲೂ ಗೀಚಬಲ್ಲೆನು
ನಿನ್ನ ಹಿಂದೆ, ಮುಂದೆ ಹೀಗೆ ಕುಣಿಯಬಲ್ಲೆನು
♪
ಶ್ರುತಿ ಮೀರಿದೆ ಈ ಆವೇಗವು ಸವಿಭಾವದ ನಿನ್ನ ಸಹವಾಸಕೆ
ಬೇಕಾಗಿದೆ ಜೊತೆ ಏಕಾಂತವು, ಹೋಗೋಣವೇ ಸಣ್ಣ ವನವಾಸಕೆ?
ನಿನ್ನೆ ಕನಸಿನಲ್ಲಿ ನಾನು ನಿನ್ನ ಕಂಡ ಜಾಗವನ್ನು
ಕಣ್ಣು ತೆರೆದು ಈಗ ನಾವು ಮತ್ತೆ ನೋಡುವ
ನಿನ್ನ ಹೃದಯದಲ್ಲಿ ನಾನೊಮ್ಮೆ ಇಣುಕಿ ನೋಡಲೇನು?
ನೀನೇ ನನ್ನಯ ಅಂದಗಾರನು
ನೋಡಬೇಡವೋ ಇನ್ನು ಯಾರನೂ
ಮಾತಿನಲ್ಲೇ ಹೇಳಬಲ್ಲೆನು
ರೇಖೆಯಲ್ಲೂ ಗೀಚಬಲ್ಲೆನು
ನಿನ್ನ ಹಿಂದೆ, ಮುಂದೆ ಹೀಗೆ ಕುಣಿಯಬಲ್ಲೆನು
ನೀನೇ ನನ್ನಯ ಅಂದಗಾರನು
ನನ್ನ ಕಾಡುವ ಚಂದ ಪೋರನು
ನಿನ್ನ ಪ್ರೇಮರೋಗ ನಾನೀಗ ವಾಸಿ ಮಾಡಲೇನು?
ನೀನೇ ನನ್ನಯ ಅಂದಗಾರನು
ನೋಡಬೇಡವೋ ಇನ್ನು ಯಾರನೂ