00:00
05:56
ಏನಾಗಲಿ ಮುಂದೆ ಸಾಗು ನೀ
ಬಯಸಿದ್ದೆಲ್ಲ ಸಿಗದು ಬಾಳಲಿ
ಬಯಸಿದ್ದೆಲ್ಲ ಸಿಗದು ಬಾಳಲಿ
ನನ್ನಾಣೆ ನನ್ನ ಮಾತು ಸುಳ್ಳಲ್ಲ
ನನ್ನಾಣೆ ನನ್ನ ಮಾತು ಸುಳ್ಳಲ್ಲ
ಏನಾಗಲಿ ಮುಂದೆ ಸಾಗು ನೀ
ಬಯಸಿದ್ದೆಲ್ಲ ಸಿಗದು ಬಾಳಲಿ
ಬಯಸಿದ್ದೆಲ್ಲ ಸಿಗದು ಬಾಳಲಿ
ನನ್ನಾಣೆ ನನ್ನ ಮಾತು ಸುಳ್ಳಲ್ಲ
ನನ್ನಾಣೆ ನನ್ನ ಮಾತು ಸುಳ್ಳಲ್ಲ
♪
ಚಲಿಸುವ ಕಾಲವು ಕಲಿಸುವ ಪಾಠವ
ಮರೆಯ ಬೇಡ ನೀ, ತುಂಬಿಕೋ ಮನದಲಿ
♪
ಚಲಿಸುವ ಕಾಲವು ಕಲಿಸುವ ಪಾಠವ
ಮರೆಯ ಬೇಡ ನೀ ತುಂಬಿಕೋ ಮನದಲಿ
ಇಂದಿಗೋ ನಾಳೆಗೋ ಮುಂದಿನ ಬಾಳಲಿ
ಗೆಲ್ಲುವಂಥ ಸ್ಫೂರ್ತಿ ದಾರಿದೀಪ ನಿನಗೆ ಆ ಅನುಭವ
ಇಂದಿಗೋ ನಾಳೆಗೋ ಮುಂದಿನ ಬಾಳಲಿ
ಗೆಲ್ಲುವಂಥ ಸ್ಫೂರ್ತಿ ದಾರಿದೀಪ ನಿನಗೆ ಆ ಅನುಭವ
ನಿನಗೆ ಆ ಅನುಭವ
ಏನಾಗಲಿ ಮುಂದೆ ಸಾಗು ನೀ
♪
ಬಯಸಿದ್ದೆಲ್ಲ ಸಿಗದು ಬಾಳಲಿ
♪
ಏನಾಗಲಿ ಮುಂದೆ ಸಾಗು ನೀ
ಬಯಸಿದ್ದೆಲ್ಲ ಸಿಗದು ಬಾಳಲಿ
ಬಯಸಿದ್ದೆಲ್ಲ ಸಿಗದು ಬಾಳಲಿ
ನನ್ನಾಣೆ ನನ್ನ ಮಾತು ಸುಳ್ಳಲ್ಲ
ನನ್ನಾಣೆ ನನ್ನ ಮಾತು ಸುಳ್ಳಲ್ಲ
♪
ಕರುಣೆಗೆ ಬೆಲೆ ಇದೆ, ಪುಣ್ಯಕೆ ಫಲವಿದೆ
ದಯವ ತೋರುವ ಮಣ್ಣಿನ ಗುಣವಿದೆ
♪
ಸಾವಿನ ಸುಳಿಯಲಿ ಸಿಲುಕಿದ ಜೀವಕೆ
ಜೀವ ನೀಡುವ ಹೃದಯವೇ ದೈವವು
ಹರಸಿದ ಕೈಗಳು ನಮ್ಮನು ಬೆಳೆಸುತಾ
ವಿಧಿಯ ಬರಹವಾಗಿ ಮೌನದಲ್ಲೇ ನಮ್ಮನು ಕಾಯುತಾ
ಪ್ರತಿಫಲ ಬಯಸದೆ ತೋರಿದ ಕರುಣೆಯು
ಮೊದಲು ಮನುಜನೆಂಬ ಸಾರ್ಥಕತೆಯ ನೆಮ್ಮದಿ ತರುವುದು
ನೆಮ್ಮದಿ ತರುವುದು
ಏನಾಗಲಿ ಮುಂದೆ ಸಾಗು ನೀ
ಪ್ರೀತಿಗಾಗೇ ಬದುಕು ಬಾಳಲಿ
ಪ್ರೀತಿಗಾಗೇ ಬದುಕು ಬಾಳಲಿ
ನನ್ನಾಣೆ ಪ್ರೀತಿ ಎಂದೂ ಸುಳ್ಳಲ್ಲ
ನನ್ನಾಣೆ ಪ್ರೀತಿ ಎಂದೂ ಸುಳ್ಳಲ್ಲ