background cover of music playing
Hele Kogile - K. S. Chithra

Hele Kogile

K. S. Chithra

00:00

04:59

Similar recommendations

Lyric

ಹೇಳೇ ಕೋಗಿಲೆ, ಇಂಪಾಗಲಾ?

ಹೇಳೇ ಮಲ್ಲಿಗೆ, ಕಂಪಾಗಲಾ?

ಎಲ್ಲೆಲ್ಲೂ ಹೊಸಬೆಳಕು ಕಂಡಂತಾಯಿತು

ಹೇಳೇ ಇಬ್ಬನಿ, ತಂಪಾಗಲಾ?

ಹೇಳೇ ದುಂಬಿಯೇ, ಜೊಂಪಾಗಲಾ?

ಎಲ್ಲೆಲ್ಲೂ ಹೊಸಚಿಗುರು ಬಂದಂತಾಯಿತು

ಹೇ, ಓ, ಮೈನಾ, ಈ ಮೈನಾ ಮರೆತಾಯಿತು

ಈ ಮನದುಂಬಿ ಹುರಿದುಂಬಿದಂತಾಯಿತು

ಹೇ, ಏಕಿಂತ ಲವಲವಿಕೆ ಮೈಗೂಡಿತು?

ಹೇಳೇ ಕೋಗಿಲೆ, ಇಂಪಾಗಲಾ?

ಎಲ್ಲೆಲ್ಲೂ ಹೊಸಬೆಳಕು ಕಂಡಂತಾಯಿತು

ಜಿಗಿಯೋ ಭಾವನೆಯು ಮೈಯಲಿ ಹಸಿರ ಉತ್ಸವವ ಮಾಡಿತು

ಕನಸೋ, ಕಲ್ಪನೆಯೋ ತೋಚದೆ ಕುಮುಲ ಪುಲಕಗಳ ತಂದಿತು

ಹೂವುಗಳ ಪರಿಮಳವೇ ಪರಿಪರಿ ನಾಚುವಂತೆ

ಹೃದಯವೇ ಘಮಿಸುತಿದೆ ಏಕಿಂದು?

ಹೇಳೇ ಕೋಗಿಲೆ, ಇಂಪಾಗಲಾ?

ಎಲ್ಲೆಲ್ಲೂ ಹೊಸಬೆಳಕು ಕಂಡಂತಾಯಿತು

ಹೇ, ಓ, ಮೈನಾ, ಈ ಮೈನಾ ಮರೆತಾಯಿತು

ಈ ಮನದುಂಬಿ ಹುರಿದುಂಬಿದಂತಾಯಿತು

ಹೇ, ಏಕಿಂತ ಲವಲವಿಕೆ ಮೈಗೂಡಿತು?

ಹೇಳೇ ಕೋಗಿಲೆ, ಇಂಪಾಗಲಾ?

ಮುಗಿಲ ಮೇಲೇರಿ ಹಾರುವ ಬಯಕೆ ಏಕಿಂದು ಮೂಡಿತು?

ಕಡಲ ಒಡಲಾಳ ಈಜುವ ತವಕ ಏಕೆ ಕಾಡಿತು?

ಹೊಸ ಆಕಾಶವಿದೋ, ಹೊಸತು ಭೂಮಿ ಇದೋ?

ಹೃದಯವೇ ಭ್ರಮಿಸುತಿದೆ ಏಕಿಂದು?

ಹೇಳೇ ಕೋಗಿಲೆ, ಇಂಪಾಗಲಾ?

ಹೇಳೇ ಮಲ್ಲಿಗೆ, ಕಂಪಾಗಲಾ?

ಎಲ್ಲೆಲ್ಲೂ ಹೊಸಬೆಳಕು ಕಂಡಂತಾಯಿತು

ಹೇಳೇ ಇಬ್ಬನಿ, ತಂಪಾಗಲಾ?

ಹೇಳೇ ದುಂಬಿಯೇ, ಜೊಂಪಾಗಲಾ?

ಎಲ್ಲೆಲ್ಲೂ ಹೊಸಚಿಗುರು ಬಂದಂತಾಯಿತು

ಹೇ, ಓ, ಮೈನಾ, ಈ ಮೈನಾ ಮರೆತಾಯಿತು

ಈ ಮನದುಂಬಿ ಹುರಿದುಂಬಿದಂತಾಯಿತು

ಹೇ, ಏಕಿಂತ ಲವಲವಿಕೆ ಮೈಗೂಡಿತು?

ಹೇಳೇ ಕೋಗಿಲೆ, ಇಂಪಾಗಲಾ?

ಎಲ್ಲೆಲ್ಲೂ ಹೊಸಬೆಳಕು ಕಂಡಂತಾಯಿತು

- It's already the end -